ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಭ್ರಷ್ಟಾಚಾರ ಪ್ರಕರಣ: ಮಾಜಿ ಸಂಸದ ವಿಜಯ್ ದರ್ದ್, ಪುತ್ರ ಸಹಿತ ನಾಲ್ವರಿಗೆ ಜೈಲು ಶಿಕ್ಷೆ
Update: 2023-07-26 17:53 GMT
ಹೊಸದಿಲ್ಲಿ: ಚತ್ತೀಸ್ಗಢದಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ರಾಜ್ಯ ಸಭಾ ಸದಸ್ಯ ಹಾಗೂ ಲೋಕಮತ ಸಮೂಹದ ವಿಜಯ ದರ್ದ್, ಅವರ ಪುತ್ರ ದೇವೇಂದ್ರ ದರ್ದ್, ಮೆಸರ್ಸ್ ಜೆಎಲ್ಡಿ ಯುವಾತ್ಮಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ಸ್ನ ನಿರ್ದೇಶಕ ಮನೋಜ್ ಕುಮಾರ್ ಜೈಸ್ವಾಲ್ಗೆ ದಿಲ್ಲಿ ವಿಶೇಷ ನ್ಯಾಯಾಲಯ ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ, ಇಬ್ಬರು ಹಿರಿಯ ಸರಕಾರಿ ಅಧಿಕಾರಿಗಳಾದ ಕೆ.ಎಸ್. ಕ್ರೊಫಾ, ಕೆ.ಸಿ. ಸಮ್ರಿಯಾ ಅವರಿಗೆ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಚತ್ತೀಸ್ಗಢದ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿ ಈ ಹಿಂದೆ ನ್ಯಾಯಾಲಯ ಮಾಜಿ ರಾಜ್ಯ ಸಭಾ ಸಂಸದ ವಿಜಯ ದರ್ದ್ ಹಾಗೂ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಅವರನ್ನು ದೋಷಿಗಳು ಎಂದು ಪರಿಗಣಿಸಿತ್ತು.