ಗಾಝಾ | ಇಸ್ರೇಲ್ ದಾಳಿಯಲ್ಲಿ 5 ಮಂದಿಯ ಮೃತ್ಯು

Update: 2024-07-28 17:06 GMT

ಸಾಂದರ್ಭಿಕ ಚಿತ್ರ | PC : NDTV 

ಗಾಝಾ ಪಟ್ಟಿ : ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದ ಅಲ್-ಮವಾಸಿ ಶಿಬಿರದ ಮೇಲೆ ರವಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ನವಜಾತ ಶಿಶುವಿನ ಸಹಿತ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದು 7 ಮಂದಿ ಗಾಯಗೊಂಡಿರುವುದಾಗಿ ಗಾಝಾ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.

ಸುರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದ ಅಲ್-ಮವಾಸಿ ಶಿಬಿರ ಪ್ರದೇಶಗಳಲ್ಲಿ ಸಾವಿರಾರು ಸ್ಥಳಾಂತರಿತ ಫೆಲೆಸ್ತೀನೀಯರು ಆಶ್ರಯ ಪಡೆದಿದ್ದರು. ರವಿವಾರದಿಂದ ಅಲ್-ಮವಾಸಿಯ ಕರಾವಳಿ ಪ್ರದೇಶ ಸೇರಿದಂತೆ ಖಾನ್ ಯೂನಿಸ್ ನಗರದ ಸುತ್ತಮುತ್ತ ಇಸ್ರೇಲ್ ಪಡೆಗಳ ಕಾರ್ಯಾಚರಣೆ ಬಿರುಸುಗೊಂಡಿದೆ. ರವಿವಾರ ಅಲ್-ಮವಾಸಿಯಲ್ಲಿ ಸ್ಥಳಾಂತರಿತ ಜನರು ನೆಲೆಸಿದ್ದ ಶಿಬಿರಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಗೋಲನ್ ಹೈಟ್ಸ್ ಮೇಲಿನ ದಾಳಿಗೆ ಪ್ರತೀಕಾರ ಕ್ರಮವಾಗಿ ರವಿವಾರ ಲೆಬನಾನ್ನಲ್ಲಿ ಹಿಜ್ಬುಲ್ಲಾಗಳ 7 ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News