ಗಾಝಾ | ಮುರಿದು ಬಿದ್ದ ತೇಲು ಸೇತುವೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದ ಅಮೆರಿಕ ಸೇನೆ
ಗಾಝಾ: ಫೆಲೆಸ್ತೀನ್ ನಿರಾಶ್ರಿತರಿಗೆ ನೆರವು ಪೂರೈಕೆಗಾಗಿ ಅಮೆರಿಕ ಸೇನೆ ಗಾಝಾ ಕರಾವಳಿಯಲ್ಲಿ ನಿರ್ಮಿಸಿದ್ದ ಸೇತುವೆಯ ಭಾಗವೊಂದು ಮುರಿದುಬಿದ್ದುದರಿಂದ ಅದನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ. ಇದರಿಂದಾಗಿ ಫೆಲೆಸ್ತೀನಿಯರಿಗೆ ಮಾನವೀಯ ನೆರವನ್ನು ಒದಗಿಸಲು ನಡೆಸಲಾಗುತ್ತಿರುವ ಪ್ರಯತ್ನಗಳಿಗೆ ಹಿನ್ನಡೆಯುಂಟಾಗಿದೆ.
ಗಾಝಾ ಕರಾವಳಿಯಲ್ಲಿ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣವನ್ನು ನಿರ್ಮಿಸಲಾಗುವುದೆಂದು ಅಮೆರಿಕ ಅಧ್ಯಕ್ಷ ಜೋಬೈಡನ್ ಮಾರ್ಚ್ನಲ್ಲಿ ಪ್ರಕಟಿಸಿದ್ದರು. ಗಾಝಾ ಕರಾವಳಿಯ ತೂಗುವ ಸೇತುವೆಯನ್ನು ಅಮೆರಿಕ ಸೇನೆ ನಿರ್ಮಿಸಿತ್ತು. 320 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾದ ಈ ತೂಗುಸೇತುವೆಯನ್ನು 90 ದಿನಗಳ ಅವಧಿ.ಯಲ್ಲಿ ನಿರ್ಮಿಸಲಾಗಿತ್ತು. ಸುಮಾರು ಅಮೆರಿಕದ ಸೇನೆಯ ಸುಮಾರು 1 ಸಾವಿರ ಸಿಬ್ಬಂದಿ ಸೇತುವೆಯ ನಿರ್ಮಾಣದಲ್ಲಿ ಪಾಲ್ಗೊಂಡಿದ್ದು.
ತೂಗುಸೇತುವೆಯ ಒಂದು ಭಾಗವು ಪ್ರತ್ಯೇಕಗೊಂಡಿದ್ದರಿಂದ ಇಡೀ ಸೇತುವೆಯನ್ನು ಇಸ್ರೇಲ್ನಲ್ಲಿರುವ ಆಶ್ಡೊಡ್ ಬಂದರಿಗೆ ಕೊಂಡೊಯ್ಯಲಾಗುವುದು ಎಂದು ಅಮೆರಿಕದ ರಕ್ಷಣಾ ಕಾರ್ಯಾಲಯ ಪೆಂಟಾಗನ್ನ ವಕ್ತಾರೆ ಸಬ್ರಿನಾ ಸಿಂಗ್ ತಿಳಿಸಿದ್ದಾರೆ.
ತೇಲು ಸೇತುವೆಯ ದುರಸ್ತಿಗೆ ಒಂದು ವಾರ ಬೇಕಾಗಿದ್ದು, ಆನಂತರ ಅದನ್ನು ಗಾಝಾ ಕರಾವಳಿಗೆ ಮರಳಿ ತಂದು ಜೋಡಿಸಲಾಗುವುದೆಂದು ಆಕೆ ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನದ ಪರಿಣಾಮವಾಗಿ ತೂಗುಸೇತುವೆ ಒಂದು ಭಾಗ ತುಂಡಾಗಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.