ಗಾಝಾ ಕಾಳಗ: 11ಇಸ್ರೇಲಿ ಸೈನಿಕರ ಹತ್ಯೆ

Update: 2023-11-01 18:19 GMT

Photo- PTI

ಗಾಝಾನಗರ,ನ.1: ಗಾಝಾದಲ್ಲಿ ಹಮಾಸ್ ಹೋರಾಟಗಾರರು ಬುಧವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 11 ಮಂದಿ ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಅಕ್ಟೋಬರ್ 7ರಿಂದೀಚೆಗೆ ನಡೆದ ದಾಳಿಗಳಲ್ಲಿ ಮೃತಪಟ್ಟ ಇಸ್ರೇಲಿಯೋಧರ ಸಂಖ್ಯೆ 326ಕ್ಕೇರಿದೆ.

ಗಾಝಾದಲ್ಲಿ ನಾಗರಿಕ ಸಾವುನೋವುಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದ್ದರೂ, ಕದನ ವಿರಾಮದ ಯಾವುದೇ ಸಾಧ್ಯತೆಯನ್ನು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿರಾಕರಿಸಿದ್ದಾರೆ. ಕದನ ವಿರಾಮಕ್ಕೆ ಆಗ್ರಹಿಸಿ ಮನವಿ ಮಾಡುವುದೆಂದರೆ, ಹಮಾಸ್, ಭಯೋತ್ಪಾದನೆ ಹಾಗೂ ಬರ್ಬರತೆಗೆ ಶರಣಾಗುವಂತೆ ಇಸ್ರೇಲ್‌ಗೆ ಕರೆ ನೀಡುವುದಕ್ಕೆ ಸಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಶುಕ್ರವಾರ ಮತ್ತೊಮ್ಮೆ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News