ವಾಯುಮಾಲಿನ್ಯ | ಸರಕಾರದ ವಿರುದ್ಧ ಲಾಹೋರ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ 3 ವರ್ಷದ ಬಾಲಕಿ!

Update: 2024-11-07 17:07 GMT

PC : NDTV

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ, ವಿಶೇಷವಾಗಿ ಲಾಹೋರ್‌ ನಲ್ಲಿ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ 3 ವರ್ಷದ ಬಾಲಕಿ ಗುರುವಾರ ಲಾಹೋರ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.

`ವಾಯು ಮಾಲಿನ್ಯದಿಂದಾಗಿ ಸಣ್ಣ ಮಕ್ಕಳು ಹಾಗೂ ಹಿರಿಯರು ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ. ಸಂವಿಧಾನದ ಆರ್ಟಿಕಲ್ 99-ಎ ಪ್ರಕಾರ ನಾಗರಿಕರಿಗೆ ಶುದ್ಧ ಮತ್ತು ಆರೋಗ್ಯಯುತ ಪರಿಸರವನ್ನು ಒದಗಿಸುವುದಕ್ಕೆ ಸರಕಾರ ಬದ್ಧವಾಗಿದೆ. ಆದರೆ ಪಂಜಾಬ್ ಸರಕಾರ ದೇಶದ ಸಂವಿಧಾನ ಒದಗಿಸಿರುವ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ವಿಫಲವಾಗಿದೆ. ಆದ್ದರಿಂದ ತನಗೆ, ತನ್ನ ಸ್ನೇಹಿತರಿಗೆ ಮತ್ತು ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಿಕೊಡಬೇಕು' ಎಂದು 3 ವರ್ಷದ ಬಾಲಕಿ ಅಮಲ್ ಸೆಖೆರಾ ತನ್ನ ವಕೀಲರ ಮೂಲಕ ಲಾಹೋರ್ ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾಳೆ.

ಗುರುವಾರ ಬೆಳಿಗ್ಗೆ ಲಾಹೋರ್‌ ನಲ್ಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ವಾಯುಮಾಲಿನ್ಯ ಮಟ್ಟ 800ರ ಗಡಿಯನ್ನು ಮೀರಿದ್ದು ಜಾಗತಿಕವಾಗಿ ಗರಿಷ್ಠ ಮಟ್ಟದಲ್ಲಿತ್ತು. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News