ಇಸ್ರೇಲ್ ದಾಳಿಯಲ್ಲಿ ನಸ್ರಲ್ಲಾ ಸಂಭಾವ್ಯ ಉತ್ತರಾಧಿಕಾರಿ ಸಫೀದ್ದೀನ್ ಮೃತ್ಯು : ದೃಢಪಡಿಸಿದ ಹಿಜ್ಬುಲ್ಲಾ
ಲೆಬನಾನ್ : ಇತ್ತೀಚೆಗೆ ಮೃತಪಟ್ಟ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಸಾಂಭವ್ಯ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದ್ದ ಹಶೆಮ್ ಸಫೀದ್ದೀನ್ ಇಸ್ರೇಲ್ ಮೈಮಾನಿಕ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಹಿಜ್ಬುಲ್ಲಾ ದೃಢಪಡಿಸಿದೆ.
ಇಸ್ರೇಲ್ ಮಿಲಿಟರಿ ಬೈರುತ್ ನ ದಕ್ಷಿಣ ಉಪನಗರಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಸಫೀದ್ದೀನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬೈರುತ್ ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಹಶೆಮ್ ಸಫೀದ್ದೀನ್ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ(IDF) ತಿಳಿಸಿತ್ತು. ಇದರ ಬೆನ್ನಲ್ಲಿ ʼಮಹಾನ್ ನಾಯಕ ಹುತಾತ್ಮರಾಗಿದ್ದಾರೆʼ ಎಂದು ಸಂತಾಪ ವ್ಯಕ್ತಪಡಿಸಿ ಹಿಜ್ಬುಲ್ಲಾ ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.
ಹಶೆಮ್ ಸಫೀದ್ದೀನ್ ಹಿಜ್ಬುಲ್ಲಾ ಉನ್ನತ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಸೆ.27ರಂದು ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೃತರಾದ ಹಸನ್ ನಸ್ರಲ್ಲಾ ಅವರ ಸೋದರ ಸಂಬಂಧಿಯಾಗಿದ್ದರು. ನಸ್ರಲ್ಲಾಹ್ ಅವರ ನಿಧನದ ನಂತರ ಸಫೀದ್ದೀನ್ ಹಿಜ್ಬುಲ್ಲಾದಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದ್ದರು. ಅವರು ಹಿಜ್ಬುಲ್ಲಾದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.