ಇಸ್ರೇಲ್ ವಿರುದ್ಧ ಕ್ಷಿಪಣಿ ದಾಳಿ ಆರಂಭಿಸಿದ ಹಿಜ್ಬುಲ್ಲಾ
Update: 2024-08-04 09:05 GMT
ಬೈರೂತ್: ಲೆಬಾನಾನ್ ನ ಹಿಜ್ಬುಲ್ಲಾ ಗುಂಪು ಶನಿವಾರ ಇಸ್ರೇಲ್‍ನ ಮೇಲೆ ಹಲವು ಕತ್ಯುಷಾ ಕ್ಷಿಪಣಿಗಳನ್ನು ಸಿಡಿಸಿರುವುದಾಗಿ ಪ್ರಕಟಿಸಿದೆ. ಬಹುತೇಕ ಕ್ಷಿಪಣಿಗಳನ್ನು ತಾನು ಭೇದಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಉತ್ತರ ಇಸ್ರೇಲ್‍ನ ಬಿಯಾತ್ ಹಿಲ್ಲೆಲ್ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಬೆಂಬಲಿತ ಸಂಘಟನೆ ಹಿಜ್ಬುಲ್ಲಾ ಹೇಳಿಕೊಂಡಿದೆ. ಲೆಬಬಾನ್‍ನಲ್ಲಿ ಕಫರ್ ಕಿಲಾ ಮತ್ತು ದೀರ್ ಸರಿಯನ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದಾಗಿ ಸ್ಪಷ್ಟಪಡಿಸಿದೆ. ಕೇವಲ ಮಿಲಿಟರಿ ಗುರಿಗಳ ಮೇಲೆ ಮಾತ್ರವಲ್ಲದೇ ಇಸ್ರೇಲ್‍ನ ಒಳನುಗ್ಗಿ ಹಿಜ್ಬುಲ್ಲಾ ದಾಳಿ ನಡೆಸುವ ನಿರೀಕ್ಷೆ ಇದೆ ಎಂದು ಇರಾನ್ ಹೇಳಿದೆ.
ಹಮಾಸ್‍ನ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್ ಮೇಲೆ ನಡೆಸಿದ ದಾಳಿಯಲ್ಲಿ ಇಸ್ರೇಲ್ ಹತ್ಯೆ ಮಾಡಿದ ಬೆನ್ನಲ್ಲೇ ಹಿಜ್ಬುಲ್ಲಾ ಈ ದಾಳಿ ನಡೆಸಿದೆ.