ಇಸ್ರೇಲ್ ಮೇಲೆ ಹಿಜ್ಬುಲ್ಲಾ ಕ್ಷಿಪಣಿ ದಾಳಿ

Update: 2024-04-23 16:32 GMT

ಸಾಂದರ್ಭಿಕ ಚಿತ್ರ |

ಬೈರೂತ್: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ, ಉತ್ತರ ಇಸ್ರೇಲ್‍ನಲ್ಲಿ ಸೇನಾ ಕೇಂದ್ರ ಕಚೇರಿಯನ್ನು ಗುರಿಯಾಗಿಸಿ ಸೋಮವಾರ ರಾತ್ರಿ ಕ್ಷಿಪಣಿಗಳ ಮಳೆಗರೆಯಲಾಗಿದೆ ಎಂದು ಹಿಜ್ಬುಲ್ಲಾ ಮೂಲಗಳು ಹೇಳಿವೆ.

ಲೆಬನಾನ್‍ನಲ್ಲಿ ನೆಲೆ ಹೊಂದಿರುವ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿಗೆ ಇರಾನ್ ಆರ್ಥಿಕ ಮತ್ತು ಶಸ್ತ್ರಾಸ್ತ್ರ ನೆರವು ಒದಗಿಸುತ್ತಿದೆ. ಎಯಿನ್ ಝೆಯಿಟಿಮ್ ಸೇನಾ ನೆಲೆಯ 3ನೇ ಪದಾತಿ ದಳದ ಪ್ರಧಾನ ಕಚೇರಿಯ ಮೇಲೆ 82 ಎಂಎಂ ಮತ್ತು 132 ಎಂಎಂ ಕಟ್ಯುಷಾ ರಾಕೆಟ್‍ಗಳಿಂದ ದಾಳಿ ನಡೆಸಲಾಗಿದೆ. ಲೆಬನಾನ್ ಕಡೆಯಿಂದ ಸುಮಾರು 35 ರಾಕೆಟ್‍ಗಳನ್ನು ಉಡಾಯಿಸಲಾಗಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಇಸ್ರೇಲ್ ದೃಢಪಡಿಸಿದೆ.

ರಾಕೆಟ್ ಹಾರಿಬಂದ ದಕ್ಷಿಣ ಲೆಬನಾನ್‍ನ ಹಿಜ್ಬುಲ್ಲಾ ನೆಲೆಯನ್ನು ಗುರುತಿಸಿ ಪ್ರತಿದಾಳಿ ನಡೆಸಲಾಗಿದ್ದು ಇಬ್ಬರು ಹಿಜ್ಬುಲ್ಲಾ ಸದಸ್ಯರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News