ಇಸ್ರೇಲ್ ನ ಬಂದರು ನಗರ ಹೈಫಾ ಮೇಲೆ ಹಿಜ್ಬುಲ್ಲಾದಿಂದ ರಾಕೆಟ್ ದಾಳಿ
Update: 2024-10-07 04:56 GMT
ಹೈಫಾ: ಇಸ್ರೇಲ್ ನ ಬಂದರು ನಗರವಾದ ಹೈಫಾ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿಯನ್ನು ನಡೆಸಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದೆ.
ಹೈಫಾ ಮತ್ತು ಟಿಬೇರಿಯಾಸ್ ನಗರದಲ್ಲಿ ರಾಕೆಟ್ ದಾಳಿ ನಡೆಸಲಾಗಿದೆ. ರಾಕೆಟ್ ದಾಳಿಯ ನಂತರ ಚಿಕಿತ್ಸೆಗಾಗಿ ಕನಿಷ್ಠ ಎಂಟು ಜನರನ್ನು ಹೈಫಾದ ರಾಂಬಮ್ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇದಲ್ಲದೆ ಲೆಬನಾನಿನ ರಾಜಧಾನಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿಯನ್ನು ನಡೆಸಿದ್ದರಿಂದ ದಕ್ಷಿಣ ಬೈರುತ್ ನಲ್ಲಿ ಕಳೆದ 24 ಗಂಟೆಯಲ್ಲಿ ಹಲವು ನಾಗರಿಕರು ಸಾವನ್ನಪ್ಪಿದ್ದಾರೆ. ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರವನ್ನು ಸುತ್ತುವರಿದು ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 9 ಮಕ್ಕಳು ಸೇರಿದಂತೆ 17 ಮಂದಿ ಮೃತಪಟ್ಟಿದ್ದಾರೆ.