ಅಮೆರಿಕದಲ್ಲಿ ರಸ್ತೆ ಅಪಘಾತ ; ಭಾರತೀಯ ಮೂಲದ ಇಬ್ಬರ ಸಾವು
Update: 2024-04-03 15:23 GMT
ನ್ಯೂಯಾರ್ಕ್: ಅಮೆರಿಕದ ಒರೆಗಾನ್ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಬಾಲಕಿ ಹಾಗೂ ಆಕೆಯ ತಾಯಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಒರೆಗಾನ್‍ನ ಹೆದ್ದಾರಿ ಸಂಖ್ಯೆ 211ರಲ್ಲಿ ಆಂಧ್ರಪ್ರದೇಶ ಮೂಲದ ನರೇಶ್‍ಬಾಬು ಕಮತ್ಮನ್ (36), ಅವರ ಪತ್ನಿ ಗೀತಾಂಜಲಿ (32) ವರ್ಷ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದ ಕಾರು ಸಿಗ್ನಲ್ ಜಂಪ್ ಮಾಡಿ ಮತ್ತೊಂದು ವಾಹನಕ್ಕೆ ಡಿಕ್ಕಿಯಾಗಿದೆ. 6 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟರೆ ತೀವ್ರ ಗಾಯಗೊಂಡಿದ್ದ ಗೀತಾಂಜಲಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ನರೇಶ್ ಬಾಬು ಮತ್ತು ಪುತ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.