ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿಯ ಸಾಧ್ಯತೆ ಈಗಲೂ ಪರಿಶೀಲನೆಯಲ್ಲಿದೆ : ಇಸ್ರೇಲ್
Update: 2024-10-19 16:24 GMT
ಟೆಲ್‌ಅವೀವ್: ಇರಾನ್‌ನ ಮೇಲೆ ಪ್ರತೀಕಾರ ದಾಳಿ ನಡೆಸುವಾಗ ಅದರ ಸೇನಾ ಮೂಲಸೌಕರ್ಯಗಳ ಮೇಲೆ ಗುರಿಯಿರಿಸಬೇಕೆಂದು ಇಸ್ರೇಲ್‌ನ ಮನವೊಲಿಸುವಲ್ಲಿ ಅಮೆರಿಕವು ಯಶಸ್ವಿಯಾಗಿದೆಯೆಂದು ಮಾಧ್ಯಮ ವರದಿಗಳು ಪ್ರಕಟಿಸಿರುವ ಬೆನ್ನಲ್ಲೇ, ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಈಗಲೂ ಪರಿಶೀಲನೆಯಲ್ಲಿದೆ ಎಂದು ಹಿರಿಯ ಇಸ್ರೇಲಿ ಸಂಪುಟ ಸಚಿವರೊಬ್ಬರು ಸುಳಿವು ನೀಡಿದ್ದಾರೆ.
ಅಣ್ವಸ್ತ್ರಗಳನ್ನು ಪಡೆಯುವುದರಿಂಮದ ಇರಾನಿಯನ್ನರನ್ನು ತಡೆಯಲು ಇಸ್ರೇಲ್ ಬದ್ಧವಾಗಿದೆ. ಅಣ್ವಸ್ತ್ರ ಸ್ಥಾನರಗಳ ಮೇಲೆ ದಾಳಿ ಸೇರಿದಂತೆ ಎಲ್ಲಾ ಆಯ್ಕೆಗಳು ಪರಿಶೀಲನೆಯಲ್ಲಿವೆಂದು ಇಂಧನ ಸಚಿವ ಎಲಿ ಕೊಹೆನ್ ತಿಳಿಸಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ನಡೆಸುವ ಯಾವುದೇ ಪ್ರತೀಕಾರ ದಾಳಿಯು ಸೇನಾ ಮೂಲಸೌಕರ್ಯಗಳಿಗೆ ಸೀಮಿತವಾಗಿದೆಯೆಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕಕ್ಕೆ ಭರವಸೆ ನೀಡಿದ್ದಾರೆಂದು ಮೂರು ದಿನಗಳ ಹಿಂದೆ ಸಿಎನ್‌ಎನ್ ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.