ಫೆಲೆಸ್ತೀನಿಯನ್ ಕ್ರಿಶ್ಚಿಯನ್ನರಿಗೆ ಜೆರುಸಲೇಂ ಪ್ರವೇಶ ನಿರಾಕರಿಸಿದ ಇಸ್ರೇಲ್
Update: 2025-04-13 23:01 IST

Photo courtesy of WAFA news agency
ಜೆರುಸಲೇಂ: ಗರಿಗಳ ರವಿವಾರ (ಪಾಮ್ ಸಂಡೆ) ಸಂದರ್ಭದಲ್ಲಿ ಆಕ್ರಮಿತ ಪಶ್ಚಿಮದಂಡೆಯ ಫೆಲೆಸ್ತೀನಿಯನ್ ಕ್ರಿಶ್ಚಿಯನ್ನರು ಪ್ರಾರ್ಥನೆ ಸಲ್ಲಿಸಲು ಜೆರುಸಲೇಂಗೆ ಪ್ರವೇಶಿಸುವುದನ್ನು ಇಸ್ರೇಲಿ ಅಧಿಕಾರಿಗಳು ತಡೆದಿರುವುದಾಗಿ ವರದಿಯಾಗಿದೆ.
ಜೆರುಸಲೇಂನ ಚರ್ಚ್ ನಲ್ಲಿ ನಡೆದ ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಳ್ಳಲು ಜೆರುಸಲೇಂನ ನಿವಾಸಿಗಳು ಹಾಗೂ ಇಸ್ರೇಲ್ ನಲ್ಲಿರುವ ಫೆಲೆಸ್ತೀನಿಯನ್ ಪ್ರಜೆಗಳಿಗೆ ಸೀಮಿತ ಅವಕಾಶ ನೀಡಲಾಗಿತ್ತು ಎಂದು ವಫಾ ಸುದ್ದಿಸಂಸ್ಥೆ ವರದಿ ಮಾಡಿದೆ.