ರಫಾ ಗಡಿದಾಟು ಬಳಿ ಇಸ್ರೇಲ್-ಈಜಿಪ್ಟ್ ಪಡೆಯ ನಡುವೆ ಗುಂಡಿನ ಚಕಮಕಿ

Update: 2024-05-27 16:45 GMT

ಸಾಂದರ್ಭಿಕ ಚಿತ್ರ

ಗಾಝಾ: ರಫಾ ಗಡಿದಾಟು ಬಳಿ ಸೋಮವಾರ ಇಸ್ರೇಲ್ ಮತ್ತು ಈಜಿಪ್ಟ್ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು ಈಜಿಪ್ಟ್ ನ ಓರ್ವ ಯೋಧ ಮೃತಪಟ್ಟಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಈಜಿಪ್ಟ್ ಗಡಿಭಾಗದಲ್ಲಿ ಗುಂಡಿನ ಚಕಮಕಿ ನಡೆದಿರುವ ವರದಿಯಿದ್ದು ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಈಜಿಪ್ಟ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಇಸ್ರೇಲ್ ಪಡೆಯಲ್ಲಿ ಯಾವುದೇ ಸಾವು-ನೋವಿನ ವರದಿಯಿಲ್ಲ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News