ಬೈರೂತ್ ಮೇಲೆ ಕೆಳಮಟ್ಟದಲ್ಲಿ ಹಾರಿದ ಇಸ್ರೇಲ್ ಯುದ್ಧ ವಿಮಾನ

Update: 2024-08-06 16:33 GMT

ಸಾಂದರ್ಭಿಕ ಚಿತ್ರ | NDTV

ಬೈರೂತ್: ಇಸ್ರೇಲ್‍ನ ಯುದ್ಧವಿಮಾನಗಳು ಮಂಗಳವಾರ ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿವೆ . ಯುದ್ಧ ವಿಮಾನಗಳು ಬರಿಗಣ್ಣಿಗೆ ಸ್ಪಷ್ಟವಾಗಿ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಭಾರೀ ಸದ್ದಿನೊಂದಿಗೆ ಅತ್ಯಂತ ಕೆಳಮಟ್ಟದಲ್ಲಿ ಸೂಪರ್ ಸಾನಿಕ್ ಯುದ್ಧವಿಮಾನಗಳು ಹಾರಿಹೋಗಿವೆ. ಕಳೆದ ವಾರ ದಕ್ಷಿಣ ಲೆಬನಾನ್‍ನ ಬೈರೂತ್‍ನಲ್ಲಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದ ಹಿಜ್ಬುಲ್ಲಾ ಕಮಾಂಡರ್ ಫೌದ್ ಶುಕ್ರ್ ಅವರಿಗೆ ಸಂತಾಪ ಸೂಚಿಸುವ ಸಭೆಯನ್ನುದ್ದೇಶಿಸಿ ಹಿಜ್ಬುಲ್ಲಾ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ ಮಾತನಾಡುವುದಕ್ಕೆ ಕೆಲವೇ ನಿಮಿಷಗಳ ಮೊದಲು ಈ ಘಟನೆ ನಡೆದಿದೆ ಎಂದು ವರದಿ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News