ಗಾಝಾ ಯುದ್ಧ ನಿಲ್ಲಿಸಲು ಜಂಟಿ ಪ್ರಯತ್ನ ಮುಂದುವರಿಕೆ: ಈಜಿಪ್ಟ್, ಇಯು ನಿರ್ಧಾರ
ಕೈರೊ : ಮಧ್ಯಪ್ರಾಚ್ಯ ವಲಯದಲ್ಲಿನ ಪರಿಸ್ಥಿತಿ, ವಿಶೇಷವಾಗಿ ಗಾಝಾ ಬಿಕ್ಕಟ್ಟಿನ ಬಗ್ಗೆ ಯುರೋಪಿಯನ್ ಯೂನಿಯನ್(ಇಯು)ನ ವಿದೇಶಾಂಗ ವ್ಯವಹಾರ ಮತ್ತು ಭದ್ರತಾ ಕಾರ್ಯನೀತಿಯ ಉನ್ನತ ಅಧಿಕಾರಿ ಜೋಸೆಫ್ ಬೊರೆಲ್ ವ್ಯಕ್ತಪಡಿಸಿರುವ ಸಕಾರಾತ್ಮಕ ನಿಲುವಿಗಾಗಿ ಅವರನ್ನು ಶ್ಲಾಘಿಸುತ್ತೇವೆ ಎಂದು ಈಜಿಪ್ಟ್ ನ ವಿದೇಶಾಂಗ ಸಚಿವ ಬದ್ರ್ ಅಬ್ದುಲ್ ಅಟ್ಟಿ ಹೇಳಿದ್ದಾರೆ.
ಬೋರೆಲ್ ಮತ್ತು ಟರ್ಕಿ ವಿದೇಶಾಂಗ ಸಚಿವ ಹಕನ್ ಫಿದಾನ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಅವರು, ಗಾಝಾ ಯುದ್ಧ ನಿಲ್ಲಿಸಲು ಎರಡೂ ದೇಶಗಳು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿದರು. ಜೂನ್ 29-30ರಂದು ನಡೆದಿದ್ದ ಈಜಿಪ್ಟ್ -ಯುರೋಪಿಯನ್ ಯೂನಿಯನ್ ಹೂಡಿಕೆ ಸಮಾವೇಶದ ಯಶಸ್ಸನ್ನು ಸ್ವಾಗತಿಸಿದ ಅಬ್ದುಲ್ ಅಟ್ಟಿ, ಈಜಿಪ್ಟ್ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದರು ಎಂದು ಈಜಿಪ್ಟ್ ಸರಕಾರದ ಮೂಲಗಳು ಹೇಳಿವೆ.