ಮಾಲ್ಡೀವ್ಸ್ ಬಿಕ್ಕಟ್ಟು ಉಲ್ಬಣ: ಬಹುತೇಕ ಖಾಲಿ ಸದನದಲ್ಲಿ ಅಧ್ಯಕ್ಷರ ಭಾಷಣ

Update: 2024-02-06 03:13 GMT

Photo: twitter.com/lucasjalyl

ಹೊಸದಿಲ್ಲಿ: ಮಾಲ್ಡೀವ್ಸ್ ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣವಾಗಿದ್ದು, 87 ಸದಸ್ಯರನ್ನು ಹೊಂದಿದ ಸದನದಲ್ಲಿ ಕೇವಲ 24 ಸಂಸದರು ಅಧಿವೇಶನದಲ್ಲಿ ಪಾಲ್ಗೊಂಡಿರುವುದು ಇದರ ಸ್ಪಷ್ಟ ಸೂಚನೆಯಾಗಿದೆ. ಕೇವಲ 24 ಸದಸ್ಯರನ್ನು ಉದ್ದೇಶಿಸಿ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಭಾಷಣ ಮಾಡಿದರು.

ಡೆಮೋಕ್ರಟಿಕ್ ಪಕ್ಷದ 13 ಸಂಸದರು ಹಾಗೂ ಮಾಲ್ಡೀವನ್ ಡೆಮಾಕ್ರಟಿಕ್ ಪಾರ್ಟಿಯ 43 ಮಂದಿ ಸಂಸದರು ಸರ್ಕಾರ "ಪ್ರಜಾಪ್ರಭುತ್ವವಿರೋಧಿ ಮಾರ್ಗ ಅನುಸರಿಸುತ್ತಿದೆ" ಎಂದು ಆಪಾದಿಸಿ ಸದನ ಬಹಿಷ್ಕರಿಸಿದ್ದಾರೆ.

ದ್ವೀಪರಾಷ್ಟ್ರದಿಂದ ತನ್ನ ಪಡೆಗಳನ್ನು ಹಿಂಪಡೆಯಬೇಕು ಎಂದು ಆದೇಶಿಸಿರುವ ಮುಯಿಝ್ಝು ಅವರ ಭಾರತ ವಿರೋಧಿ ನಿಲುವನ್ನು ಎರಡು ವಿರೋಧ ಪಕ್ಷಗಳು ಈಗಾಗಲೇ ಕಟುವಾಗಿ ಟೀಕಿಸಿವೆ. ಭಾರತ ಭೇಟಿಯನ್ನು ರದ್ದುಪಡಿಸಿ, ಚೀನಾಗೆ ಭೇಟಿ ನೀಡಿರುವ ಅಧ್ಯಕ್ಷರ ನಡೆ ಕೂಡಾ ವಿರೋಧ ಪಕ್ಷಗಳನ್ನು ಕೆರಳಿಸಿವೆ.

ಭಾರತದ ಸೇನಾ ಸಿಬ್ಬಂದಿಯ ಮೊದಲ ತಂಡ ಮಾರ್ಚ್ 10ರ ಒಳಗಾಗಿ ದೇಶದಿಂದ ತೆರಳಲಿದ್ದು, ಮೇ 10ರ ವೇಳೆಗೆ ಸಂಪೂರ್ಣವಾಗಿ ಭಾರತ ಸೇನೆ ವಾಪಸ್ಸಾಗಲಿದೆ ಎಂದು ತಮ್ಮ ಚೊಚ್ಚಲ ಭಾಷಣದಲ್ಲಿ ಮುಯಿಝ್ಝು ಹೇಳಿದರು.

ಮಾಲ್ಡೀವ್ಸ್ ನ ಬಹುತೇಕ ಜನ ತಮ್ಮ ಆಡಳಿತವನ್ನು ಬೆಂಬಲಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡ ಮುಯಿಝ್ಝು, ವಿದೇಶಿ ಸೇನೆಯ ಅಸ್ತಿತ್ವ ದೇಶದಿಂದ ಮರೆಯಾಗಬೇಕು ಎನ್ನುವುದು ಬಹುಜನರ ನಿರೀಕ್ಷೆಯಾಗಿದೆ. ಕಳೆದುಕೊಂಡಿರುವ ನಮ್ಮ ಸಾಗರ ಸರಹದ್ದನ್ನು ನಾವು ಮರಳಿ ಪಡೆಯುತ್ತೇವೆ ಎಂದು ಮುಯಿಝ್ಝು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News