ಗಾಝಾದ ಖಾನ್ ಯೂನಿಸ್ ನ ಆಸ್ಪತ್ರೆಯಲ್ಲಿ ಸಾಮೂಹಿಕ ಸಮಾಧಿ | 180 ದೇಹಗಳು ಪತ್ತೆ

Update: 2024-04-21 16:05 GMT

PC ; aljazeera.com

ಖಾನ್ಯೂನಿಸ್ (ಗಾಝಾ) :ಗಾಝಾದ ಖಾನ್ ಯೂನಿಸ್ ನಲ್ಲಿರುವ ನಾಸಿರ್ ಮೆಡಿಕಲ್ ಕಾಂಪ್ಲೆಕ್ಸ್ ನ ಒಳಗೆ ಸಾಮೂಹಿಕ ಸಮಾಧಿಯೊಂದನ್ನು ಫೆಲೆಸ್ತೀನ್ ನಾಗರಿಕ ರಕ್ಷಣಾ ಇಲಾಖೆಯ ಸಿಬ್ಬಂದಿ ಶನಿವಾರ ಪತ್ತೆಹಚ್ಚಿದ್ದಾರೆ. ಈ ಸಮಾಧಿಯಲ್ಲಿ ಈವರೆಗೆ 180 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಅಲ್ ಜಝೀರ ವರದಿ ಮಾಡಿದೆ.

ಇಸ್ರೇಲ್ ಸೇನೆಯು ಎಪ್ರಿಲ್ 7ರಂದು ಈ ನಗರದಿಂದ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಂಡ ಬಳಿಕ ಈ ಸಾಮೂಹಿಕ ಸಮಾಧಿ ಪತ್ತೆಯಾಗಿದೆ. ಇಸ್ರೇಲ್ ಸೇನೆಯು ತಿಂಗಳುಗಳ ಕಾಲ ಖಾನ್ ಯೂನಿಸ್ ನಗರದ ಮೇಲೆ ನಿರಂತರ ಬಾಂಬ್ ದಾಳಿ ನಡೆಸಿದೆ ಮತ್ತು ಭೀಕರ ಭೂ ದಾಳಿಯನ್ನು ನಡೆಸಿದೆ. ಹಾಗಾಗಿ, ನಗರದ ಹೆಚ್ಚಿನ ಭಾಗವು ಧ್ವಂಸಗೊಂಡಿದೆ.

‘‘ಆಸ್ಪತ್ರೆಯ ಅಂಗಳದಲ್ಲಿ ನಾಗರಿಕ ರಕ್ಷಣಾ ಇಲಾಖೆಯ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿ, ಇಸ್ರೇಲಿ ಸೇನೆಯು ಈ ಸಾಮೂಹಿಕ ಸಮಾಧಿಯಲ್ಲಿ ಹೂತು ಹಾಕಿರುವ 180 ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಹಿರಿಯ ಮಹಿಳೆಯರು, ಮಕ್ಕಳು ಮತ್ತು ಯವ ಜನರ ದೇಹಗಳು ಅಲ್ಲಿವೆ’’ ಎಂದು ಅಲ್ ಜಝೀರಾದ ವರದಿಗಾರ ಹನಿ ಮಹ್ಮೂದ್ ರವಿವಾರ ವರದಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News