ಮೊಸಳೆಯನ್ನು ಮದುವೆಯಾದ ಮೆಕ್ಸಿಕೋ ನಗರದ ಮೇಯರ್

Update: 2023-07-02 18:03 GMT

PHOTO CREDIT: Luis Villalobos/Shutterstock

ಮೆಕ್ಸಿಕೋ ಸಿಟಿ: ದಕ್ಷಿಣ ಮೆಕ್ಸಿಕೋದ ಸ್ಯಾನ್ ಪೆಡ್ರೊ ಹ್ಯುಮೆಲುಲಾ ನಗರದ ಮೇಯರ್ ವಿಕ್ಟರ್ ಹ್ಯುಗೊ ಸೊಸ ಮೊಸಳೆಯನ್ನು ವಿವಾಹ ಆಗಿರುವುದಾಗಿ ವರದಿಯಾಗಿದೆ.

ನಗರದ ಜನತೆಗೆ ಅದೃಷ್ಟವನ್ನು ತರುವ ಸ್ಥಳೀಯ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ವಿಧಿಯಂತೆ ಈ ಆಚರಣೆ ನಡೆದಿದೆ. 230 ವರ್ಷಗಳ ಹಿಂದೆ ಈ ಪ್ರಾಂತದ ಎರಡು ಬುಡಕಟ್ಟು ಸಮುದಾಯಗಳ ನಡುವೆ ಶಾಂತಿ ಒಪ್ಪಂದ ವಿವಾಹದ ಮೂಲಕ ನಡೆದಿದೆ. ಇದರ ವಾರ್ಷಿಕೋತ್ಸವವನ್ನು ಪ್ರತೀ ವರ್ಷ ಆಚರಿಸಲಾಗುತ್ತದೆ.

ಅದರಂತೆ ದೊರೆ (ಈಗಿನ ಕಾಲದಲ್ಲಿ ಮೇಯರ್) ಮತ್ತೊಂದು ಸಮುದಾಯದ ಹುಡುಗಿಯನ್ನು (ಈಗ ಸಾಂಕೇತಿಕವಾಗಿ ಮೊಸಳೆ) ವಿವಾಹವಾಗುವ ಸಂಪ್ರದಾಯ ಮುಂದುವರಿದಿದೆ. ಮದುಮಗಳಂತೆ ಸಿಂಗರಿಸಿದ ಮೊಸಳೆಯನ್ನು ಈ ಪ್ರದೇಶದ ಪ್ರತೀ ಮನೆಗೂ ಕೊಂಡೊಯ್ದು ವಿವಾಹದ ಆಮಂತ್ರಣ ನೀಡುವ ಕ್ರಮವಿದೆ(ಮುನ್ನೆಚ್ಚರಿಕೆ ಕ್ರಮವಾಗಿ ಮೊಸಳೆಯ ಬಾಯಿಯನ್ನು ಹಗ್ಗದಿಂದ ಕಟ್ಟಲಾಗುತ್ತದೆ).

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News