3 ಲಕ್ಷ ಯೋಧರ ಪಡೆ ಸಜ್ಜು : ನೇಟೊ
Update: 2024-06-13 16:47 GMT
ಬ್ರಸೆಲ್ಸ್ : ರಶ್ಯದಿಂದ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3 ಲಕ್ಷ ಯೋಧರ ತುಕಡಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ನೇಟೊ ಒಕ್ಕೂಟದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಉಕ್ರೇನ್ ಮೇಲೆ ರಶ್ಯ ಯುದ್ಧ ಸಾರಿದ ಬಳಿಕ ರಶ್ಯದ ಸಂಭಾವ್ಯ ಆಕ್ರಮಣವನ್ನು ಎದುರಿಸಲು ನೇಟೊ ರಾಷ್ಟ್ರಗಳು ಸಿದ್ಧತೆ ನಡೆಸುತ್ತಿವೆ. ಸಂಭಾವ್ಯ ದಾಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಸದಸ್ಯ ದೇಶಗಳು ಒಟ್ಟಾಗಿ 3 ಲಕ್ಷ ಯೋಧರ ತುಕಡಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಶೀತಲ ಸಮರದ ಯುಗ ಅಂತ್ಯಗೊಂಡ ಬಳಿಕ ಇದೇ ಪ್ರಥಮ ಬಾರಿ ಇಂತಹ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ರಶ್ಯ ಆಕ್ರಮಣ ನಡೆಸಿದರೆ ಪ್ರತ್ಯುತ್ತರ ನೀಡಲು ಅಗತ್ಯವಿರುವ ಯೋಧರನ್ನು ನೇಟೊ ಒಕ್ಕೂಟ ಹೊಂದಿದೆ. ಆದರೆ ವಾಯುರಕ್ಷಣಾ ವ್ಯವಸ್ಥೆ ಹಾಗೂ ದೀರ್ಘ ಶ್ರೇಣಿಯ ಕ್ಷಿಪಣಿಯಂತಹ ಶಸ್ತ್ರಾಸ್ತ್ರಗಳ ಕೊರತೆಯಿದೆ. ಈ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.