ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ

Update: 2024-05-20 14:40 GMT

Photo : ANI 

ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ `ಪ್ರಚಂಡ' ಸೋಮವಾ ಸಂಸತ್‌ ನಲ್ಲಿ ವಿಶ್ವಾಸಮತ ಗೆದ್ದಿದ್ದು ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ನಾಲ್ಕನೇ ಬಾರಿ ವಿಶ್ವಾಸಮತ ಗೆದ್ದಂತಾಗಿದೆ.

ಪ್ರಮುಖ ವಿರೋಧ ಪಕ್ಷ ನೇಪಾಳಿ ಕಾಂಗ್ರೆಸ್ ಮತದಾನದಿಂದ ದೂರ ಉಳಿದ ಬಳಿಕ 158 ಸದಸ್ಯರು ಮತಚಲಾಯಿಸಿದ್ದು `ಪ್ರಚಂಡ' 157 ಮತ ಪಡೆದು ಭರ್ಜರಿ ಗೆಲುವು ಸಾಧಿಸಿರುವುದಾಗಿ ಸ್ಪೀಕರ್ ಘೋಷಿಸಿದರು. 275 ಸದಸ್ಯಬಲದ ಸಂಸತ್‌ ನಲ್ಲಿ ವಿಶ್ವಾಸಮತ ಗೆಲ್ಲಲು 138 ಮತಗಳ ಅಗತ್ಯವಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ(ಮಾವೋವಾದಿ) ಪಕ್ಷದ ಮುಖಂಡರಾದ 69 ವರ್ಷದ ಪ್ರಚಂಡ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಮಿತ್ರಪಕ್ಷ ಜನತಾ ಸಮಾಜವಾದಿ ಪಕ್ಷ(ಜೆಎಸ್ಪಿ) ಹಿಂಪಡೆದುಕೊಂಡ ಹಿನ್ನೆಲೆಯಲ್ಲಿ ವಿಶ್ವಾಸಮತ ಪಡೆಯಲಾಗಿದೆ. ನೇಪಾಳದ ಸಂವಿಧಾನ ಪ್ರಕಾರ, ಮೈತ್ರಿಕೂಟದ ಸರಕಾರಕ್ಕೆ ನೀಡಿದ ಬೆಂಬಲವನ್ನು ಯಾವುದಾದರೂ ಪಕ್ಷ ವಾಪಾಸು ಪಡೆದರೆ ವಿಶ್ವಾಸಮತ ಯಾಚಿಸಬೇಕು. ಉಪಪ್ರಧಾನಿ ಹಾಗೂ ಗೃಹಸಚಿವ ರವಿ ಲಮಿಚನೆ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ತನಿಖಾ ಸಮಿತಿ ರಚಿಸಬೇಕೆಂದು ಆಗ್ರಹಿಸುತ್ತಿರುವ ವಿಪಕ್ಷ ನೇಪಾಳಿ ಕಾಂಗ್ರೆಸ್ ಮತದಾನವನ್ನು ಬಹಿಷ್ಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News