ನ್ಯೂಯಾರ್ಕ್: ಭಾರತದ ರಾಯಭಾರಿಯನ್ನು ತಡೆದ ಖಲಿಸ್ತಾನ್ ಬೆಂಬಲಿಗರು
Update: 2023-11-27 17:14 GMT
ನ್ಯೂಯಾರ್ಕ್: ಅಮೆರಿಕಕ್ಕೆ ಭಾರತದ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ನ್ಯೂಯಾರ್ಕ್ನ ಗುರುದ್ವಾರಕ್ಕೆ ರವಿವಾರ ಭೇಟಿ ನೀಡಿದಾಗ ಖಾಲಿಸ್ತಾನ್ ಬೆಂಬಲಿಗರ ಗುಂಪೊಂದು ಅವರನ್ನು ಸುತ್ತುವರಿದು ಘೋಷಣೆ ಕೂಗಿದ ಘಟನೆ ನಡೆದಿದೆ.
`ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ನೀವೇ ಹೊಣೆ. ಜತೆಗೆ ಮತ್ತೊಬ್ಬ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೂ ಸಂಚು ರೂಪಿಸಿದ್ದೀರಿ' ಎಂದು ಖಾಲಿಸ್ತಾನ್ ಬೆಂಬಲಿಗರು ಘೋಷಣೆ ಕೂಗುತ್ತಿದ್ದಂತೆಯೇ ಸ್ಥಳದಲ್ಲಿದ್ದ ಇತರರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆಗ ಪ್ರತಿಭಟನಾಕಾರರು `ನಮ್ಮ ಪ್ರಶ್ನೆಗೆ ಉತ್ತರಿಸಿ' ಎಂದು ಸಂಧುರನ್ನು ಆಗ್ರಹಿಸಿದ್ದು ಈ ಘಟನೆಯ ವೀಡಿಯೊ ವೈರಲ್ ಆಗಿದೆ.
ಹಿಮ್ಮತ್ ಸಿಂಗ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ ಎಂದು ತರಣ್ಜಿತ್ ಸಿಂಗ್ ಸಂಧು ಪ್ರತಿಕ್ರಿಯಿಸಿದ್ದಾರೆ.