ನಿಜ್ಜಾರ್ ಆಪ್ತನ ಮನೆಮೇಲೆ ಗುಂಡು ಹಾರಿಸಿದ ಪ್ರಕರಣ: ಇಬ್ಬರು ಯುವಕರ ಬಂಧನ

Update: 2024-02-09 17:01 GMT

ಸಾಂದರ್ಭಿಕ ಚಿತ್ರ

ಟೊರಂಟೊ : ಹತ್ಯೆಯಾದ ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ನ ಆಪ್ತನ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಯುವಕರನ್ನು ಬಂಧಿಸಿರುವುದಾಗಿ ಕೆನಡಾದ ಪೊಲೀಸರು ಹೇಳಿದ್ದಾರೆ.

ನಿಜ್ಜಾರ್ ಆಪ್ತ ಸಿಮ್ರಾನ್ಜಿತ್ ಸಿಂಗ್ ಮನೆಯ ಮೇಲೆ ಕಳೆದ ವಾರ ಗುಂಡಿನ ದಾಳಿ ನಡೆದಿತ್ತು. ಈ ಘಟನೆಯ ತನಿಖೆಯ ಅಂಗವಾಗಿ ಖಚಿತ ಮಾಹಿತಿಯ ಮೇರೆಗೆ ಸರ್ರೆ ನಗರದ 140ನೇ ರಸ್ತೆಯಲ್ಲಿನ ಮನೆಯೊಂದರಲ್ಲಿ ಶೋಧ ನಡೆಸಿದಾಗ ಮೂರು ಬಂದೂಕು ಹಾಗೂ ಮದ್ದುಗುಂಡು  ಪತ್ತೆಯಾಗಿದೆ. ಮನೆಯಲ್ಲಿದ್ದ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಕೆನಡಾ ಪೊಲೀಸ್ ವಕ್ತಾರ ಸಬ್ರ್ಜಿತ್ ಸಿಂಗ್ ಸಂಘಾ ಹೇಳಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News