ದಕ್ಷಿಣ ಕೊರಿಯಾ ಜತೆಗಿನ ಯುದ್ಧ ಅನಿವಾರ್ಯ ವಾಸ್ತವ: ಕಿಮ್ ಜಾಂಗ್

Update: 2024-01-10 16:09 GMT

ಪೋಂಗ್ಯಾಂಗ್ : ದಕ್ಷಿಣ ಕೊರಿಯಾ ದೇಶವು ಸಂಘರ್ಷವನ್ನು ಪ್ರಚೋದಿಸುತ್ತಿದೆ. ಯುದ್ಧವನ್ನು ಅನಿವಾರ್ಯಗೊಳಿಸುವ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಬುಧವಾರ ಹೇಳಿದ್ದಾರೆ.

ದಕ್ಷಿಣ ಕೊರಿಯಾವು ಉತ್ತರ ಕೊರಿಯಾದ ಕಡೆಗಿನ ಅತ್ಯಂತ ಪ್ರತಿಕೂಲ ದೇಶವೆಂದು ನಿರ್ಧರಿಸುವ ಸಮಯ ಬಂದಿದೆ. ಉಭಯ ದೇಶಗಳ ನಡುವಿನ ಸಂಬಂಧಗಳು `ಬದಲಾವಣೆಯ ಹೊಸ ಹಂತ' ಮತ್ತು `ಅನಿವಾರ್ಯ ವಾಸ್ತವತೆ'ಗೆ ನಿದರ್ಶನವಾಗಿದೆ. ಅವರು ಶಸ್ತ್ರಾಸ್ತ್ರಗಳ ಸಂಗ್ರಹಣೆಗೆ ಆದ್ಯತೆ ನೀಡಿರುವುದರಿಂದ ನಮ್ಮ ದೇಶದ ಮಿಲಿಟರಿ ಸಾಮಥ್ರ್ಯವನ್ನೂ ಬಲಗೊಳಿಸುವ ಮತ್ತು ಪರಮಾಣು ಶಕ್ತಿಯನ್ನು ವೃದ್ಧಿಸುವ ಅನಿವಾರ್ಯತೆಯಿದೆ. ನಾವು ಕೊರಿಯನ್ ಪರ್ಯಾಯ ದ್ವೀಪದಲ್ಲಿ ಏಕಪಕ್ಷೀಯವಾಗಿ ಶಕ್ತಿಪ್ರದರ್ಶನಕ್ಕೆ ಮುಂದಾಗುವುದಿಲ್ಲ. ಆದರೆ ನಾವು ಯುದ್ಧವನ್ನು ತಪ್ಪಿಸುವ ಉದ್ದೇಶವನ್ನೂ ಹೊಂದಿಲ್ಲ ಎಂದು ಕಿಮ್ ಜಾಂಗ್ ಉನ್ ಪ್ರತಿಪಾದಿಸಿರುವುದಾಗಿ ಸರಕಾರಿ ಸ್ವಾಮ್ಯದ ಕೆಸಿಎನ್ಎ ಸುದ್ಧಿಸಂಸ್ಥೆ ವರದಿ ಮಾಡಿದೆ.

ಕೊರಿಯಾದ ಶಾಂತಿಯುತ ಪುನರೇಕೀಕರಣ ಸಾಧ್ಯವಿಲ್ಲ. ದಕ್ಷಿಣ ಕೊರಿಯಾ ಜತೆಗಿನ ಸಂಬಂಧದ ಕುರಿತ ಕಾರ್ಯನೀತಿಯಲ್ಲಿ ಶೀಘ್ರವೇ ನಿರ್ಣಾಯಕ ಬದಲಾವಣೆ ಮಾಡಿಕೊಳ್ಳುವುದಾಗಿ ಕಳೆದ ತಿಂಗಳು ಕಿಮ್ ಘೋಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News