ದಾಳಿ ಮಾಡಿದರೆ ಅಣ್ವಸ್ತ್ರ ಪ್ರಯೋಗ :ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಎಚ್ಚರಿಕೆ
Update: 2024-10-04 17:08 GMT
ಪ್ಯೊಂಗ್ಯಾಂಗ್ : ದಕ್ಷಿಣ ಕೊರಿಯಾ ಅಥವಾ ಅದರ ಮಿತ್ರರಾಷ್ಟ್ರ ಅಮೆರಿಕ ದಾಳಿ ನಡೆಸಿದರೆ ತಮ್ಮ ದೇಶವು ಯಾವುದೇ ಹಿಂಜರಿಕೆಯಿಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಿದೆ ಎಂದು ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ಕೆಸಿಎನ್ಎ ವರದಿ ಮಾಡಿದೆ.
ಶತ್ರು ಪಡೆಗಳು ಉತ್ತರ ಕೊರಿಯಾದ ಸಾರ್ವಭೌಮತ್ವದ ಮೇಲೆ ಅತಿಕ್ರಮಣ ಮಾಡುತ್ತಿದ್ದರೆ, ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ನಮ್ಮಲ್ಲಿರುವ ಎಲ್ಲಾ ಆಕ್ರಮಣಕಾರೀ ಶಕ್ತಿಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಬಳಸುತ್ತೇವೆ ಎಂದು ಕಿಮ್ ಜಾಂಗ್ ಹೇಳಿದ್ದಾರೆ. ವಿಶೇಷ ಕಾರ್ಯ ಪಡೆಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ಉತ್ತರ ಕೊರಿಯಾದ ಆಡಳಿತ ಅಂತ್ಯಗೊಳಿಸುವುದಾಗಿ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ನೀಡಿದ ಹೇಳಿಕೆಯನ್ನು ಖಂಡಿಸಿದರು.
ದಕ್ಷಿಣ ಕೊರಿಯಾ ಇತ್ತೀಚೆಗೆ ನಡೆಸಿದ ಮಿಲಿಟರಿ ಕವಾಯತಿನಲ್ಲಿ ಬಂಕರ್ ಸ್ಫೋಟಿಸುವ ದೈತ್ಯ ಕ್ಷಿಪಣಿಯನ್ನು ಪ್ರದರ್ಶಿಸಿತ್ತು.