ಪ್ರತಿಭಟನಾಕಾರರ ಬೇಡಿಕೆ ಗಮನಿಸಿ: ಇಸ್ರೇಲ್‍ಗೆ ವಿಶ್ವಸಂಸ್ಥೆ ಆಗ್ರಹ

Update: 2023-07-27 18:11 GMT

ಜಿನೆವಾ: ಇಸ್ರೇಲ್ ಸರಕಾರದ ವಿವಾದಾತ್ಮಕ ನ್ಯಾಯಾಂಗ ಸುಧಾರಣೆ ಕ್ರಮಗಳನ್ನು ವಿರೋಧಿಸಿ, ಪ್ರಜಾಪ್ರಭುತ್ವ ಮತ್ತು ಮೂಲಭೂತ ಸ್ವಾತಂತ್ರ್ಯಗಳ ರಕ್ಷಣೆಗಾಗಿ ಪ್ರತಿಭಟನೆ ನಡೆಸುತ್ತಿರುವವರ ಆಗ್ರಹಕ್ಕೆ ಕಿವಿಗೊಡುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಕರ್ ಟರ್ಕ್ ಗುರುವಾರ ಇಸ್ರೇಲ್‍ಗೆ ಕರೆ ನೀಡಿದ್ದಾರೆ.

ಹಲವಾರು ತಿಂಗಳುಗಳಿಂದ ಇಸ್ರೇಲ್‍ನಾದ್ಯಂತದ ಜನರು ಪ್ರಜಾಪ್ರಭುತ್ವ ಮತ್ತು ಮೂಲಭೂತ ಸ್ವಾತಂತ್ರ್ಯದ ರಕ್ಷಣೆಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವುದನ್ನು ಗಮನಿಸಿದ್ದೇವೆ.

ಇಸ್ರೇಲ್‍ನಲ್ಲಿ ಹಲವು ದಶಕಗಳಿಂದ ಶ್ರಮದಾಯಕವಾಗಿ ನಿರ್ಮಿಸಲ್ಪಟ್ಟಿರುವ ಮಾನವ ಹಕ್ಕುಗಳ ಪರವಾಗಿ, ಪ್ರಜಾಸತ್ತಾತ್ಮಕ ಸಂಸ್ಥೆ ಮತ್ತು ಸಾಂವಿಧಾನಿಕ ಸಮತೋಲನದ ರಕ್ಷಣೆಗಾಗಿ ಈ ವಿಶಾಲವ್ಯಾಪ್ತಿಯ ಸಾಮಾಜಿಕ ಅಭಿಯಾನವು ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದೆ. ಇದು ಮೂಲಭೂತ ಶಾಸಕಾಂಗ ಬದಲಾವಣೆಗೆ ಸಾರ್ವಜನಿಕರ ಆತಂಕವನ್ನು ವ್ಯಕ್ತಪಡಿಸಿದೆ' ಎಂದು ವೋಕರ್ ಟರ್ಕ್ ಹೇಳಿದ್ದಾರೆ.

ಇಸ್ರೇಲ್ ಸರಕಾರದ ಕ್ರಮವನ್ನು ವಿರೋಧಿಸಿ ಅಲ್ಲಿನ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಮೇಲ್ಮನವಿಯ ಬಗ್ಗೆ ಪ್ರತಿಕ್ರಿಯಿಸಿದ ಟರ್ಕ್ `ಯಾವುದೇ ರಾಜಕೀಯ ಒತ್ತಡ ಅಥವಾ ಮಧ್ಯಪ್ರವೇಶಕ್ಕೆ ಅವಕಾಶ ನೀಡದೆ ಈ ಅರ್ಜಿಯನ್ನು ಕಾನೂನು ಪ್ರಕಾರ ಸುಪ್ರೀಂಕೋರ್ಟ್ ಪರಿಶೀಲನೆ ನಡೆಸಬೇಕಾಗಿದೆ' ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News