ಪಾಕಿಸ್ತಾನ | ಬಸ್ಸು ನದಿಗೆ ಉರುಳಿ ಕನಿಷ್ಠ 14 ಮಂದಿ ಮೃತ್ಯು

Update: 2024-11-13 15:50 GMT

PC : shutterstock 

ಇಸ್ಲಾಮಾಬಾದ್ : ಪಾಕಿಸ್ತಾನದ ಈಶಾನ್ಯದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರಾಂತದ ಡಯಾಮರ್ ಜಿಲ್ಲೆಯಲ್ಲಿ ಬಸ್ಸೊಂದು ಸಿಂಧೂ ನದಿಗೆ ಉರುಳಿಬಿದ್ದು ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು ಇತರ 13 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಗಿಲ್ಗಿಟ್ ಬಾಲ್ಟಿಸ್ತಾನದಿಂದ ಪಂಜಾಬ್‍ ನ ಚಾಕ್ವಾಲ್ ಜಿಲ್ಲೆಗೆ ಮದುವೆ ಕಾರ್ಯಕ್ರಮಕ್ಕೆ ವರನ ಕಡೆಯವರು ತೆರಳುತ್ತಿದ್ದ ಬಸ್ಸು ಸಿಂಧೂ ನದಿಯ ಸೇತುವೆಯ ಮೇಲೆ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ್ದು ಬಸ್ಸಿನಲ್ಲಿ 27 ಮಂದಿಯಿದ್ದರು. ಇದುವರೆಗೆ 14 ಮೃತದೇಹಗಳು ಪತ್ತೆಯಾಗಿದ್ದು ಉಳಿದ 13 ಮಂದಿಯ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಯಾರೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News