ನೇಪಾಳದಲ್ಲಿ ವಿಮಾನ ಪತನ: 18 ಮಂದಿ ಮೃತ್ಯು, ಪೈಲಟ್ ಪಾರು
ಕಾಠ್ಮಂಡು: ನೇಪಾಳದ ಕಾಠ್ಮಂಡುವಿನ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಪತನಗೊಂಡಿದ್ದು, 18 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸಿಬ್ಬಂದಿ ಸಹಿತ 19 ಮಂದಿಯಿದ್ದ ಶೌರ್ಯ ಏರ್ ಲೈನ್ ವಿಮಾನ ಟೇಕ್ ಆಫ್ ಆಗುವ ವೇಳೆಯೇ ಪತನಗೊಂಡಿದೆ. 18 ಮಂದಿ ಮೃತಪಟ್ಟಿದ್ದು, ಫೈಲಟ್ ಬದುಕುಳಿದ್ದಾರೆ.
ದೇಶೀಯ ಶೌರ್ಯ ಏರ್‌ಲೈನ್‌ಗೆ ಸೇರಿದ ವಿಮಾನವು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾದ ಪೋಖರಾದ ರೆಸಾರ್ಟ್ ಪಟ್ಟಣಕ್ಕೆ ತೆರಳುತ್ತಿತ್ತು.
ಶೌರ್ಯ ಏರ್‌ಲೈನ್ಸ್ ವಿಮಾನವು ಇಬ್ಬರು ಸದಸ್ಯರನ್ನೊಳಗೊಂಡ ಸಿಬ್ಬಂದಿ ಮತ್ತು ಕಂಪನಿಯ 17 ಸಿಬ್ಬಂದಿಯನ್ನು ಪರೀಕ್ಷಾರ್ಥ ಉಡಾವಣೆಯಾಗಿ ಹೊತ್ತೊಯ್ಯುತ್ತಿತ್ತು. ಪತನಗೊಂಡ ವಿಮಾನದ ಪೈಲಟ್‌ನನ್ನು ರಕ್ಷಿಸಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನೇಪಾಳಿ ಪೊಲೀಸ್ ವಕ್ತಾರ ಡಾನ್ ಬಹದ್ದೂರ್ ಕರ್ಕಿ ತಿಳಿಸಿದ್ದಾರೆ.
ಬುಧವಾರ 11 ಗಂಟೆಗೆ ಈ ಅವಘಡ ಸಂಭವಿಸಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.
#BREAKING | Video Shows Exact Moment Plane Crashed At Kathmandu Airport #NepalPlaneCrash #Kathmandu #Nepal pic.twitter.com/saj1eUNN9m
— NDTV (@ndtv) July 24, 2024