ಭಾರತೀಯ ಯುವತಿಯ ಸಾವನ್ನು ಗೇಲಿ ಮಾಡಿದ ಪೊಲೀಸ್ ಅಧಿಕಾರಿ

Update: 2023-09-13 17:18 GMT

Photo: PTI

 ಹ್ಯೂಸ್ಟನ್ : ವರ್ಷದ ಆರಂಭದಲ್ಲಿ ಪೊಲೀಸ್ ಗಸ್ತು ವಾಹನವೊಂದು ಡಿಕ್ಕಿ ಹೊಡೆದು  23 ವರ್ಷ ವಯಸ್ಸಿನ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬ ಅಪಹಾಸ್ಯ ಮಾಡುತ್ತಿರುವ ದೃಶ್ಯ ಬಾಡಿಕ್ಯಾಮ್ನಿಂದ ಬಯಲಾಗಿದ್ದು, ಸಿಯಾಟಲ್ ರಾಜ್ಯದ ಪೊಲೀಸರು ಬಗ್ಗೆ ತನಿಖೆ ಆರಂಭಿಸಿದ್ದಾರೆ.

ವರ್ಷದ ಜನವರಿಯಲ್ಲಿ  ಹ್ಯೂಸ್ಟನ್ ನಗರದಲ್ಲಿ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಅವರು ರಸ್ತೆ ದಾಟುತ್ತಿದ್ದಾಗ, ಪೊಲೀಸ್ ಅಧಿಕಾರಿ ಕೆವಿನ್ ಡೇವಿಸ್  ವೇಗವಾಗಿ ಚಲಾಯಿಸುತ್ತಿದ್ದ ಗಸ್ತುವಾಹನ ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದರು. ಮಾದಕದ್ರವ್ಯದ ವಿಪರೀತ ಸೇವನೆಯ ಪ್ರಕರಣದ ದೂರಿನ ಕುರಿತಂತೆ ಪರಿಶೀಲನೆಗಾಗಿ ತೆರಳುತ್ತಿದ್ದ ಆತ ತಾಸಿಗೆ 74 ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸುತ್ತಿದ್ದನೆನ್ನಲಾಗಿದೆ.

ಅವಘಡದ ಬಳಿಕ  ಪೊಲೀಸ್ ಅಧಿಕಾರಿ ಡೇನಿಯಲ್ ಆಡೆರರ್ ಎಂಬಾತ ಇನ್ನೋರ್ವ ಪೊಲೀಸ್ ಅಧಿಕಾರಿ ಜೊತೆ ಸಂಭಾಷಣೆ ನಡೆಸಿದ ಸಂದರ್ಭ  ದುರಂತ ಘಟನೆಯನ್ನು ಗೇಲಿ ಮಾಡಿ ನಗೆಯಾಡಿದ ಹಾಗೂ  ವಾಹನ ಚಲಾಯಿಸುತ್ತಿದ್ದ ಪೊಲೀಸ್ ಅಧಿಕಾರಿ ಕೆವಿನ್ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯವನ್ನು ತಳ್ಳಿಹಾಕಿದ ಸಂಭಾಷಣೆಗಳ ವಿಡಿಯೋ ಈಗ ಬಯಲಿಗೆ ಬಂದಿದೆ.

 ವಿಡಿಯೋ ಕ್ಲಿಪ್ನಲ್ಲಿ ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್  ಉಪಾಧ್ಯಕ್ಷನಾದ ಆಡೆರರ್, ಗಿಲ್ಡ್ ಅಧ್ಯಕ್ಷ ಮೈಕ್ ಸೊಲನ್ ಅವರಿಗೆ ಕರೆ ಮಾಡಿ, ‘ಮೃತ ಯುವತಿಯ ಕುಟುಂಬಕ್ಕೆ ಪರಿಹಾರವಾಗಿ 11 ಸಾವಿರ ಡಾಲರ್ಚೆಕ್ ಬರೆದುಬಿಡಿ, ಸಾಕುಎಂದು ಉಡಾಫೆಯಿಂದ ಹೇಳಿದ್ದಾನೆ. ವಿದ್ಯಾರ್ಥಿನಿಯ ವಯಸ್ಸನ್ನು ತಪ್ಪಾಗಿ ಉಲ್ಲೇಖಿಸಿದ ಆತ, ಏನಿದ್ದರೂ ಆಕೆಗೆ 26 ವರ್ಷ ವಯಸ್ಸಾಗಿದ್ದು, ಆಕೆಯ ಬೆಲೆ ಸೀಮಿತವಾದುದು ಎಂದು  ಅಪಹಾಸ್ಯ ಮಾಡಿದ್ದಾನೆ.

ಜಾಹ್ನವಿಗೆ ಡಿಕ್ಕಿ ಹೊಡೆದ ಪೊಲೀಸ್ ಅಧಿಕಾರಿ ತಾಸಿಗೆ 74 ಮೈಲು ವೇಗದಲ್ಲಿ  ವಾಹನ ಚಲಾಯಿಸುತ್ತಿದ್ದನೆಂದು ಹೇಳಿದ  ಆಡೆರರ್, ಅವಘಡವೆಸಗಿದ ಪೊಲೀಸ್ ಅಧಿಕಾರಿ ಕೆವಿನ್ ಡೇವಿಸ್ ತರಬೇತುಗೊಂಡ ಚಾಲನಾಗಿದ್ದುನಿರ್ಲಕ್ಷ್ಯದ ಚಾಲನೆಯೆಂದು ಹೇಳಲು  ಸಾಧ್ಯವಿಲ್ಲ ಎಂದಿದ್ದ. ಅಪಘಾತದ ವೇಗಕ್ಕೆ ಆಕೆ 40 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದಾಳೆಆಕೆಯೊಬ್ಬ ಸಾಮಾನ್ಯ ವ್ಯಕ್ತಿಯೆಂದು ತಾತ್ಸಾರ ಭಾವನೆಯೊಂದಿಗೆ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಬಾಡಿಕ್ಯಾಮ್ನಿಂದ  ತೆಗೆಯಲಾದ ವೀಡಿಯೊದಲ್ಲಿ ಆಡೆರರ್ ಸಂಭಾಷಣೆ ಮಾತ್ರ ಲಭ್ಯವಾಗಿದೆ.

ತರುವಾಯ ಆಡೆರರ್ ಬಗ್ಗೆ ಹೇಳಿಕೆಯೊಂದನ್ನು ನೀಡಿ, ತಾನು ಕೋರ್ಟ್ನಲ್ಲಿ ನ್ಯಾಯವಾದಿಗಳ  ವಾದ ವೈಖರಿಯನ್ನು ಅಣಕಿಸಿ, ಮಾತುಗಳನ್ನು ಆಡಿರುವುದಾಗಿ ಹೇಳಿಕೊಂಡಿದ್ದಾನೆ.

ಮಾತುಕತೆಯ ಸಂದರ್ಭ ಸೊಲನ್ ಅವರು ಯುವತಿಯ ಸಾವು ದುರದೃಷ್ಟಕರವಾಗಿದೆ ಎಂದು ಹೇಳಿದ್ದರು. ಆದರೆ ನ್ಯಾಯವಾದಿಗಳ ಪಾಲಿಗೆ ಆಕೆಯ ಸಾವು, ಮಾನವ ಜೀವಕ್ಕೆ ಬೆಲೆಕಟ್ಟುವ ಕುರಿತ ವಾದಗಳಾಗಿ ಪರಿಣಮಿಸುತ್ತದೆ ಎಂದು ಹೇಳಿದ್ದರು ಎಂದು ಅಡೆರರ್ ತಿಳಿಸಿದ್ದಾನೆ. ತಾನು ಯಾವುದೇ ದುರುದ್ದೇಶ ಅಥವಾ ಕಠಿಣ ಮನಸ್ಸಿನಿಂದ ಇಂತಹ ಹೇಳಿಕೆಯನ್ನು ನೀಡಿಲ್ಲವೆಂದು ಆತ ಸ್ಪಷ್ಟಪಡಿಸಿದ್ದಾನೆ.

ಅಡೆರರ್ ವಿವಾದಿತ ಸಂಭಾಷಣೆಯ  ಬಗ್ಗೆ ಸಿಯಾಟಲ್ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ದೂರು ನೀಡಿದ ಬಳಿಕ ಆತನ ವಿರುದ್ಧ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪೊಲೀಸ್ ಹೊಣೆಗಾರಿಕೆ ಇಲಾಖೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News