ಭದ್ರತಾ ಮಂಡಳಿ ಸದಸ್ಯತ್ವ: ಭಾರತಕ್ಕೆ ಬೆಂಬಲ ಪುನರುಚ್ಚರಿಸಿದ ಬೈಡನ್

Update: 2023-06-24 17:31 GMT

ಜೋ ಬೈಡನ್ | ಜೋ ಬೈಡನ್

ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಹೊಂದುವ ಭಾರತದ ಆಶಯಕ್ಕೆ ಅಮೆರಿಕದ ಬೆಂಬಲವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುನರುಚ್ಚರಿಸಿದ್ದಾರೆ.

ವಿಶ್ವಸಂಸ್ಥೆ ವ್ಯವಸ್ಥೆಗೆ ಭಾರತದ ಮಹತ್ವದ ಕೊಡುಗೆ, ಬಹುಪಕ್ಷೀಯತೆಗೆ ಬದ್ಧತೆ ಮತ್ತು ಭದ್ರತಾ ಮಂಡಳಿಯ ಸುಧಾರಣೆಗಳ ಕುರಿತು ಅಂತರ್ಸರಕಾರಿ ಸಮಾಲೋಚನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ 2028-29ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯರಾಗಿ ಭಾರತದ ಉಮೇದುವಾರಿಕೆಯನ್ನು ಬೈಡನ್ ಸ್ವಾಗತಿಸಿದರು.ಅಲ್ಲದೆ ಪರಮಾಣು ಪೂರೈಕೆದಾರರ ಗುಂಪಿನ(NSG) ಸದಸ್ಯತ್ವಕ್ಕೂ ಭಾರತವನ್ನು ಬೆಂಬಲಿಸುವುದಾಗಿ ಮತ್ತು ಈ ನಿಟ್ಟಿನಲ್ಲಿ ಸಮಾನ ಮನಸ್ಕ ದೇಶಗಳ ನೆರವನ್ನು ಒದಗಿಸಲು ಕ್ರಮ ಕೈಗೊಳ್ಳಲು ಅಮೆರಿಕ ಬದ್ಧವಾಗಿದೆ ಎಂದವರು ಹೇಳಿದ್ದಾರೆ.

ಬಹುಪಕ್ಷೀಯ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ಬುಡಮೇಲು ಮಾಡುವ ಯಾವುದೇ ಪ್ರಯತ್ನಗಳನ್ನು ಎದುರಿಸಲು ಉಭಯ ರಾಷ್ಟ್ರಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಬಹುಪಕ್ಷೀಯ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಈ ಸಂದರ್ಭದಲ್ಲಿ ಎರಡೂ ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಮತ್ತು ಶಾಶ್ವತವಲ್ಲದ ಸದಸ್ಯತ್ವ ವಿಸ್ತರಣೆ ಸೇರಿದಂತೆ ಸಮಗ್ರ ವಿಶ್ವಸಂಸ್ಥೆ ಸುಧಾರಣಾ ಕಾರ್ಯಸೂಚಿಗೆ ಬದ್ಧವಾಗಿದ್ದಾರೆ. ಜಾಗತಿಕ ಆಡಳಿತವು ಹೆಚ್ಚು ಅಂತರ್ಗತ ಮತ್ತು ಸಮಗ್ರವಾಗಿರಬೇಕು ಎಂಬ ಆಶಯದಿಂದ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಅಮೆರಿಕದ ಬೆಂಬಲವಿದೆ ಎಂದು ಉಭಯ ದೇಶಗಳ ಜಂಟಿ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News