ಸುನೀತಾ ವಿಲಿಯಮ್ಸ್‌ ಅವರ 3ನೇ ಗಗನಯಾತ್ರೆಗೆ ಅಡ್ಡಿ: ಕೆಲವೇ ನಿಮಿಷಗಳಿರುವಾಗ ತಾಂತ್ರಿಕ ವೈಫಲ್ಯದಿಂದ ಉಡಾವಣೆ ರದ್ದು

Update: 2024-05-07 06:17 GMT

ಸುನೀತಾ ವಿಲಿಯಮ್ಸ್‌ | PC: X \ @NASA_Astronauts

ಫ್ಲೋರಿಡಾ: ಫ್ಲೋರಿಡಾದ ಕೇಪ್‌ ಕೆನವರೆಲ್‌ನಲ್ಲಿರುವ ಕೆನ್ನಡಿ ಸ್ಪೇಸ್‌ ಸೆಂಟರ್‌ನಿಂದ ಇಂದು ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರನ್ನು ಹೊತ್ತೊಯ್ಯಲಿದ್ದ ಬೋಯಿಂಗ್‌ ಸ್ಟಾರಲೈನರ್‌ ಗಗನನೌಕೆಯ ಉಡಾವಣೆಯು ನಿಗದಿತ ಸಮಯಕ್ಕಿಂತ 90 ನಿಮಿಷ ಮುಂಚಿತವಾಗಿ ತಾಂತ್ರಿಕ ಸಮಸ್ಯೆಯ ಕಾರಣ ಮುಂದೂಡಲಾಯಿತು. ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 8.04ಕ್ಕೆ ಗಗನನೌಕೆ ಉಡಾವಣೆಯಾಗಬೇಕಿತ್ತು.

ಆದರೆ ನಿಗದಿತ ಸಮಯದ ಒಂದೂವರೆ ಗಂಟೆ ಮುಂಚಿತವಾಗಿ ಗಗನನೌಕೆಯನ್ನು ಹೊತ್ತೊಯ್ಯುವ ಅಟ್ಲಾಸ್‌ ವಿ ರಾಕೆಟ್‌ ಉಡಾವಣೆ ರದ್ದುಗೊಂಡಿತು. ಆಕ್ಸಿಜನ್‌ ರಿಲೀಫ್‌ ವಾಲ್ವ್‌ನಲ್ಲಿ ಆಫ್-ನಾಮಿನಲ್‌ ಸ್ಥಿತಿ ಇದ್ದುದರಿಂದ ಹೀಗೆ ಮಾಡಬೇಕಾಯಿತು ಎಂಬ ಮಾಹಿತಿ ನೀಡಲಾಯಿತು.

ಸುನೀತಾ ವಿಲಿಯಮ್ಸ್‌ ಹಾಗೂ ಅವರ ಜೊತೆ ತೆರಳಲಿದ್ದ ನಾಸಾದ ಬ್ಯಾರಿ ವಿಲ್ಮೋರ್‌ ಅವರು ಸುರಕ್ಷಿತವಾಗಿ ಗಗನನೌಕೆಯಿಂದ ಹೊರಬಂದರು.

ಈಗಾಗಲೇ ಎರಡು ಬಾರಿ ಬಾಹ್ಯಾಕಾಶಕ್ಕೆ ತೆರಳಿ 322 ದಿನಗಳ ಕಾಲ ಬಾಹ್ಯಾಕಾಶದಲ್ಲಿ ತಂಗಿರುವ ಸುನೀತಾ ಅವರಿಗೆ ಇದು ಮೂರನೇ ಪ್ರಯಾಣವಾಗಿದೆ. ಬಾಹ್ಯಾಕಾಶದಲ್ಲಿ ಮಹಿಳೆಯೊಬ್ಬರು ನಡೆಸಿದ ಗರಿಷ್ಠ ಗಂಟೆಗಳ ಸ್ಪೇಸ್‌ವಾಕ್‌ ದಾಖಲೆಯೂ ಸುನೀತಾ ವಿಲಿಯಮ್ಸ್‌ ಹೆಸರಿನಲ್ಲಿದೆ.

ಸುನೀತಾ ವಿಲಿಯಮ್ಸ್‌ ಮೊದಲ ಬಾರಿಗೆ ಡಿಸೆಂಬರ್‌ 9, 2006ರಲ್ಲಿ ಬಾಹ್ಯಾಕಾಶಕ್ಕೆ ತೆರಳಿ ಜೂನ್22, 2007 ತನಕ ಅಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News