ಸುನೀತಾ ವಿಲಿಯಮ್ಸ್ ಗೆ ಗಂಭೀರ ಆರೋಗ್ಯ ಸಮಸ್ಯೆಯ ಅಪಾಯ!

Update: 2024-08-16 16:24 GMT

ಸುನೀತಾ ವಿಲಿಯಮ್ಸ್‌ | PC: X \ @NASA_Astronauts

ವಾಶಿಂಗ್ಟನ್ : ಬಾಹ್ಯಾಕಾಶದಲ್ಲಿ ವಿಸ್ತೃತ ವಾಸ್ತವ್ಯದಿಂದಾಗಿ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮಿದುಳಿಗೆ ಹಾನಿ(ಬ್ರೈನ್ ಡ್ಯಾಮೇಜ್) ಸೇರಿದಂತೆ ಗಂಭೀರ ಆರೋಗ್ಯದ ಸಮಸ್ಯೆಗೆ ಒಳಗಾಗುವ ಅಪಾಯವಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಸಾದ ಗಗನಯಾತ್ರಿಗಳಾದ ಸುನೀತಾ ಮತ್ತು ಬ್ಯಾರಿ ವಿಲ್ಮೋರ್ ಬೋಯಿಂಗ್‍ನ ಸ್ಟಾರ್‍ಲೈನರ್ ಕ್ಯಾಪ್ಸೂಲ್‍ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜೂನ್ 6ರಂದು ತಲುಪಿದ್ದು ಒಂದು ವಾರದ ಬಳಿಕ ಭೂಮಿಗೆ ಮರಳಬೇಕಿತ್ತು. ಆದರೆ ಕ್ಯಾಪ್ಸೂಲ್(ಬಾಹ್ಯಾಕಾಶ ನೌಕೆ)ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ವಾಪಸಾತಿ ವಿಳಂಬವಾಗಿದ್ದು ಅಂತಿಮವಾಗಿ ಮುಂದಿನ ವರ್ಷದ ಫೆಬ್ರವರಿಯವರೆಗೆ ಇಬ್ಬರೂ ಬಾಹ್ಯಾಕಾಶದಲ್ಲೇ ವಾಸ್ತವ್ಯ ಇರಬೇಕಾಗುತ್ತದೆ ಎಂದು ನಾಸಾ ಸ್ಪಷ್ಟಪಡಿಸಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಗಗನಯಾತ್ರಿಗಳ ಸುರಕ್ಷತೆ ಮತ್ತು ಆರೋಗ್ಯ ಹಾಗೂ ಭವಿಷ್ಯದ ಅಂತರಿಕ್ಷ ಯೋಜನೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.

ತಜ್ಞರ ಪ್ರಕಾರ, ಬಾಹ್ಯಾಕಾಶ ಪ್ರಯಾಣಕ್ಕೆ ಸಂಬಂಧಿಸಿದ ಅಪಾಯಗಳು ಸಾಮಾನ್ಯವಾಗಿ ಚರ್ಚಿಸಲಾಗುವ ತೂಕ ಕಳೆದುಕೊಳ್ಳುವಿಕೆ ಮತ್ತು ವಿಕಿರಣದ ಅಪಾಯವನ್ನು ಮೀರಿದೆ. ಆಮ್ಲಜನಕದ ಕೊರತೆಯಿಂದ ಆಗುವ ಮಿದುಳಿನ ಹಾನಿಯ ಸಂಭಾವ್ಯತೆ ಗಂಭೀರ ವಿಷಯವಾಗಿದೆ. ಬಾಹ್ಯಾಕಾಶದಲ್ಲಿ ವಿಸ್ತರಿತ ವಾಸ್ತವ್ಯವು ಆಘಾತಕಾರಿ ಒತ್ತಡದ ಅಸ್ವಸ್ಥತೆಗೂ ಕಾರಣವಾಗಬಹುದು.

ಅನಿರೀಕ್ಷಿತ ವಿಸ್ತೃತ ಯೋಜನೆಯಿಂದಾಗಿ ಗಗನಯಾನಿಗಳು ಕುಟುಂಬದಿಂದ ಮತ್ತು ಸಮಾಜದಿಂದ ದೀರ್ಘಕಾಲದ ಪ್ರತ್ಯೇಕವಾಗಿರುತ್ತಾರೆ. ಬಾಹ್ಯಾಕಾಶ ನೌಕೆ ಅಥವಾ ಬಾಹ್ಯಾಕಾಶ ನಿಲ್ದಾಣಗಳ ಸೀಮಿತ ಜೀವನ ಪರಿಸ್ಥಿತಿಯೊಂದಿಗೆ ಈ ಪ್ರತ್ಯೇಕತೆಯು ಒಂಟಿತನ ಮತ್ತು ಭಾವನಾತ್ಮಕ ಯಾತನೆಯ ಭಾವನೆಗಳಿಗೆ ಕಾರಣವಾಗಬಹುದು. ವಿಸ್ತೃತ ಕಾರ್ಯಾಚರಣೆಗಳು ದೈಹಿಕ ಆಯಾಸ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ತೂಕವಿಲ್ಲದಿರುವಿಕೆ ಅಥವಾ ಶೂನ್ಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವ ದೈಹಿಕ ಒತ್ತಡ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News