ಅಂಕಾರ ಬಾಂಬ್ ದಾಳಿಗೆ ಸಿರಿಯಾದಲ್ಲಿ ತರಬೇತಿ: ಟರ್ಕಿ ವಿದೇಶಾಂಗ ಸಚಿವರ ಆರೋಪ

Update: 2023-10-04 17:34 GMT

ಸಾಂದರ್ಭಿಕ ಚಿತ್ರ | Photo: NDTV 

ಅಂಕಾರ : ಕಳೆದ ವಾರಾಂತ್ಯ ಟರ್ಕಿ ರಾಜಧಾನಿ ಅಂಕಾರದಲ್ಲಿ ಸರಕಾರಿ ಕಟ್ಟಡಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದ ದಾಳಿಕೋರರಿಗೆ ಸಿರಿಯಾದಲ್ಲಿ ತರಬೇತಿ ಒದಗಿಸಲಾಗಿದೆ ಎಂದು ವಿದೇಶಾಂಗ ಸಚಿವ ಹಕಾನ್ ಫಿದಾನ್ ಬುಧವಾರ ಆರೋಪಿಸಿದ್ದಾರೆ.

ಕಾನೂನುಬಾಹಿರ `ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ(ಪಿಕೆಕೆ)' ಮತ್ತು ಪೀಪಲ್ಸ್ ಪ್ರೊಟೆಕ್ಷನ್ ಯುನಿಟ್(ವೈಪಿಜಿ)ನಿಂದ ನಿಯಂತ್ರಿಸಲ್ಪಡುವ ಇರಾಕ್ ಮತ್ತು ಸಿರಿಯಾದ ಯಾವುದೇ ಮೂಲಸೌಕರ್ಯ ಮತ್ತು ಇಂಧನ ಸೌಲಭ್ಯಗಳು ಕಾನೂನುಬದ್ಧ ಮಿಲಿಟರಿ ಗುರಿಗಳಾಗಿವೆ. ಇದೀಗ ಪಿಕೆಕೆ ಮತ್ತು ವೈಪಿಜಿ ನಿಯಂತ್ರಣದಲ್ಲಿರುವ ಸೌಲಭ್ಯಗಳಿಂದ ದೂರ ಇರುವಂತೆ ಮೂರನೇ ವ್ಯಕ್ತಿಗಳಿಗೆ ನಾವು ಸಲಹೆ ನೀಡುತ್ತೇವೆ. ನಮ್ಮ ಸಶಸ್ತ್ರ ಪಡೆಗಳ ಪ್ರತ್ಯುತ್ತರ ಅತ್ಯಂತ ನಿಖರವಾಗಿರುತ್ತದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News