ಇಂಡೋನೇಶ್ಯ: ರೈಲುಗಳ ಡಿಕ್ಕಿ; ಕನಿಷ್ಟ 4 ಮಂದಿ ಸಾವು

Update: 2024-01-05 17:54 GMT

Photo Credit: AP

ಜಕಾರ್ತ: ಶುಕ್ರವಾರ ಇಂಡೊನೇಶ್ಯದ ಮುಖ್ಯ ದ್ವೀಪವಾದ ಜಾವಾದಲ್ಲಿ 2 ರೈಲುಗಳು ಮುಖಾಮುಖಿ ಡಿಕ್ಕಿಯಾಗಿ ಹಲವು ಬೋಗಿಗಳು ಹಳಿತಪ್ಪಿ ಉರುಳಿದ್ದು ಕನಿಷ್ಟ 4 ಮಂದಿ ಸಾವನ್ನಪ್ಪಿದ್ದು 22 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಜಾವಾದ ಬಾಂಡುಂಗ್ ನಗರದ ಸಿಸಲೆಂಗ ರೈಲು ನಿಲ್ದಾಣದ ಸುಮಾರು 500 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಪೂರ್ವ ಜಾವಾ ಪ್ರಾಂತದ ರಾಜಧಾನಿ ಸುರಬಯದಿಂದ ಬಾಂಡುಂಗ್ ಗೆ ಪ್ರಯಾಣಿಸುತ್ತಿದ್ದ ತುರಂಗಾ ಎಕ್ಸ್ಪ್ರೆಸ್ ರೈಲು ಪದಲರಾಂಗ್ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ರೈಲಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಕನಿಷ್ಟ 4 ಮಂದಿ ಮೃತಪಟ್ಟು ಇತರ 22 ಮಂದಿ ಗಾಯಗೊಂಡಿದ್ದಾರೆ ಎಂದು ಇಂಡೊನೇಶ್ಯಾದ ರೈಲ್ವೇ ಮಂಡಳಿಯ ವಕ್ತಾರರು ಹೇಳಿದ್ದಾರೆ. ಅಪಘಾತದ ರಭಸಕ್ಕೆ ಹಲವು ಬೋಗಿಗಳು ಹಳಿಯ ಪಕ್ಕದಲ್ಲಿದ್ದ ಗದ್ದೆಗೆ ಉರುಳಿಬಿದ್ದಿವೆ. ಎರಡೂ ರೈಲುಗಳಲ್ಲಿದ್ದ ಸುಮಾರು 160 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News