ಕ್ರಿಮಿಯಾದ ಹಡಗು ನಿರ್ಮಾಣ ಕೇಂದ್ರಕ್ಕೆ ಉಕ್ರೇನ್ ಕ್ಷಿಪಣಿ ದಾಳಿ

Update: 2023-09-13 17:29 GMT

ಸಾಂದರ್ಭಿಕ ಚಿತ್ರ Photo- PTI

ಮಾಸ್ಕೊ : ರಶ್ಯ ಸ್ವಾಧೀನಪಡಿಸಿರುವ ಕ್ರಿಮಿಯಾದಲ್ಲಿರುವ ಸೆವೆಸ್ಟೊಪೊಲ್ ಹಡಗುನಿ ರ್ಮಾಣಕೇಂದ್ರ ಮೇಲೆ ಬುಧವಾರ ನಸುಕಿನಲ್ಲಿ ಉಕ್ರೇನ್‌ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಅಲ್ಲಿದ್ದ ಎರಡು ಹಡಗುಗಳಿಗೆ ಹಾನಿಯಾಗಿದೆ ಮತ್ತು 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ರಶ್ಯ ತಿಳಿಸಿದೆ.

ಸೆವೆಸ್ಟೊಪೊಲ್ ಹಡಗುನಿರ್ಮಾಣಕೇಂದ್ರದ ಮೇಲೆ ಉಕ್ರೇನ್‌ನ ದಾಳಿಯು ಇತ್ತೀಚಿನ ವಾರಗಳಲ್ಲಿಯೇ ಅತ್ಯಂತ ಬೃಹತ್ ದಾಳಿ ಎನ್ನಲಾಗಿದೆ.

ಕಪ್ಪುಸಮುದ್ರದ ಕರಾವಳಿಯಲ್ಲಿರುವ ಸೆವೆಸ್ಟೊಪೊಲ್ ಹಡಗು ನಿರ್ಮಾಣ ಕೇಂದ್ರದ ಮೇಲೆ ಉಕ್ರೇನ್ ಸೇನೆಯು, 10 ಕ್ರೂಸ್‌ ಕ್ಷಿಪಣಿಗಳು ಹಾಗೂ ಮೂರು ಸಮುದ್ರ ಡ್ರೋನ್‌ಗಳಿಂದ ದಾಳಿ ನಡೆಸಿದೆ. ಇವುಗಳಲ್ಲಿ ಏಳು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಹಾಗೂ ಎಲ್ಲಾ ಸಮುದ್ರ ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ರಶ್ಯದ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಆದರೆ ಹಡಗುಕಟ್ಟೆಯಲ್ಲಿ ದುರಸ್ತಿಗೊಳ್ಳುತ್ತಿದ್ದ ಎರಡು ಹಡಗುಗಳಿಗೆ ಕ್ಷಿಪಣಿ ದಾಳಿಯಿಂದ ಹಾನಿಯಾಗಿದೆ ಎಂದು ಅದು ತಿಳಿಸಿದೆ.

ಆದರೆ ಈ ಬಗ್ಗೆ ಉಕ್ರೇನ್ ಅಧಿಕಾರಿಗಳಿಂದ ತಕ್ಷಣವೇ ಯಾವುದೇ ಹೇಳಿಕೆ ಹೊರಬಿದ್ದಿಲ್. ಹಡಗುನಿರ್ಮಾಣ ಕೇಂದ್ರದ ಮೇಲಿನ ದಾಳಿಯಿಂದ ಉಂಟಾದ ಅಗ್ನಿಅನಾಹುತದಲ್ಲಿ 24 ಮಂದಿ ಗಾಯಗೊಂಡಿದ್ದಾರೆ ಎಂದು ಬಂದರು ನಗರ ಸೆವೆಸ್ಟೊಪೊಲ್‌ಗೆ ರಶ್ಯದಿಂದ ನೇಮಕಗೊಂಡ ರಾಯಭಾರಿಯಾದ ಮಿಖೈಲ್ ರಾಝ್‌ ವೊಝಾಯೆವ್‌ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News