ಅಮೆರಿಕ ವಿವಿ ಪ್ರತಿಭಟನಾಕಾರರ ವಿರುದ್ಧ ಅಸಮಾನ ಬಲಪ್ರಯೋಗ | ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರ ಕಳವಳ

Update: 2024-04-30 17:33 GMT

Photo: NDtv

ವಿಶ್ವಸಂಸ್ಥೆ : ಫೆಲೆಸ್ತೀನ್ ಬೆಂಬಲಿಸಿ ಅಮೆರಿಕದ ವಿವಿಗಳ ಕ್ಯಾಂಪಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಅಮೆರಿಕದ ಭದ್ರತಾ ಪಡೆಗಳು ಅಸಮಾನ ಬಲ ಪ್ರಯೋಗಿಸಿರುವ ವರದಿಯ ಬಗ್ಗೆ ಕಳವಳಗೊಂಡಿರುವುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಮಂಗಳವಾರ ಹೇಳಿದ್ದಾರೆ.

ಅಮೆರಿಕದ ಹಲವು ಪ್ರಮುಖ ವಿವಿಗಳ ಕ್ಯಾಂಪಸ್ಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವಿರುದ್ಧ ಕೆಲವು ಕಾನೂನು ಜಾರಿ ಸಂಸ್ಥೆಗಳು ಅಸಮಾನ ಬಲ ಪ್ರಯೋಗಿಸಿರುವ ಬಗ್ಗೆ ಕಳವಳಗೊಂಡಿದ್ದೇನೆ. ವಿದ್ಯಾರ್ಥಿಗಳು ಬಂಧನ, ಶಿಸ್ತುಕ್ರಮಗಳಿಗೆ ಗುರಿಯಾಗಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾನೂನುಬದ್ಧವಾಗಿ ವ್ಯಕ್ತಪಡಿಸುವುದನ್ನು ದ್ವೇಷ ಮತ್ತು ಹಿಂಸೆಗೆ ಪ್ರಚೋದನೆ ಎಂಬ ಕಾರಣ ನೀಡಿ ಪ್ರತಿಬಂಧಿಸುವುದು ಸರಿಯಲ್ಲ ಎಂದು ಟರ್ಕ್ ಹೇಳಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News