ಉಕ್ರೇನ್ ಮೇಲೆ ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗ : ರಶ್ಯ ಎಚ್ಚರಿಕೆ
Update: 2024-11-28 17:53 GMT
ಮಾಸ್ಕೋ : ಉಕ್ರೇನ್ ರಾಜಧಾನಿ ಕೀವ್ ಮೇಲೆ ಅತ್ಯಾಧುನಿಕ `ಒರೆಶ್ನಿಕ್' ಹೈಪರ್ಸಾನಿಕ್ ಕ್ಷಿಪಣಿಯನ್ನು ಪ್ರಯೋಗಿಸಬಹುದು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಕೀವ್ ಸೇರಿದಂತೆ ಉಕ್ರೇನ್ ನ ಆಡಳಿತ ಕೇಂದ್ರ, ಮಿಲಿಟರಿ-ಕೈಗಾರಿಕಾ ವ್ಯವಸ್ಥೆಗಳು, ಮಿಲಿಟರಿ ವಿರುದ್ಧ ಒರೆಶ್ನಿಕ್ ಹೈಪರ್ಸಾನಿಕ್ ಕ್ಷಿಪಣಿ ಬಳಕೆಯನ್ನು ನಾವು ತಳ್ಳಿಹಾಕುವುದಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಪುಟಿನ್ ಹೇಳಿದ್ದಾರೆ.