ಟ್ರಂಪ್ ಹತ್ಯೆಗೆ ಯತ್ನಿಸಿದ ರಿಯಾನ್ ರೂತ್ ಯಾರು?

Update: 2024-09-16 07:16 GMT

 ರಿಯಾನ್ ವೆಸ್ಲಿ ರೂತ್ (Photo: X)

ಫ್ಲೋರಿಡಾ: ಡೊನಾಲ್ಡ್ ಟ್ರಂಪ್ ಅವರಿದ್ದ ಸ್ಥಳದಿಂದ ಅನತಿ ದೂರದಲ್ಲಿ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗ ರಿಯಾನ್ ವೆಸ್ಲಿ ರೂತ್ (58) ಎಂಬಾತನನ್ನು ಬಂಧಿಸಲಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್ ವಿರುದ್ಧ ನಡೆದ ಹತ್ಯೆ ಪ್ರಯತ್ನ ಇದು ಎಂದು ಎಫ್‍ಬಿಐ ಹೇಳಿದೆ.

ಈ ಹಿಂದೆ ನೀಡಿದ ಸಂದರ್ಶನದಲ್ಲಿ ರೂತ್, ತಾನು ಉಕ್ರೇನ್ ಬೆಂಬಲಿಗ ಎಂದು ಹೇಳಿಕೊಂಡಿದ್ದ ಮತ್ತು ರಷ್ಯಾ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಲು ಕೀವ್ ಗೆ ತೆರಳಿರುವುದಾಗಿಯೂ ವಿವರಿಸಿದ್ದ. ಪೆನ್ಸೆಲ್ವೇನಿಯಾದ ಬಟ್ಲರ್ ನಲ್ಲಿ ಈ ಮೊದಲು ನಡೆದ ಹತ್ಯೆ ಪ್ರಕರಣದ ಎರಡೇ ತಿಂಗಳಲ್ಲಿ ಮತ್ತೊಂದು ಪ್ರಯತ್ನ ನಡೆದಿದೆ.

ಉತ್ತರ ಕ್ಯಾಲಿಫೋರ್ನಿಯಾ ನಿವಾಸಿಯಾಗಿರುವ ರೂತ್ ಅಪರಾಧ ಹಿನ್ನೆಲೆ ಹೊಂದಿದ್ದಾನೆ. ರಾಜಕೀಯದ ಬಗ್ಗೆ ಅತಿಯಾಗಿ ಮಾತನಾಡುವ ಈತ ಉಕ್ರೇನನ್ನು ಮತ್ತು ಡೆಮಾಕ್ರಟಿಕ್ ಪಕ್ಷದ ಬೆಂಬಲಿಸುತ್ತಾ ಬಂದಿದ್ದ.

ಈ ಮೊದಲು ನೀಡಿದ ಸಂದರ್ಶನದಲ್ಲಿ ರೂತ್, ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಪರವಾಗಿ ಹೋರಾಡಿದ್ದಾಗಿ ತಿಳಿಸಿದ್ದ. ಕೀವ್ ತಲುಪಿದ ಬಳಿಕ ರಷ್ಯಾ- ಉಕ್ರೇನ್ ಯುದ್ಧದಲ್ಲಿ ಭಾಗವಹಿಸಲು ಜನರನ್ನು ನಿಯುಕ್ತಿ ಮಾಡಿದ್ದಾಗಿ ಹೇಳಿದ್ದ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News