ಎಚ್ಎಂಪಿ ವೈರಸ್ ಬಗ್ಗೆ ಆತಂಕ ಬೇಡ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್

Update: 2025-01-06 12:40 GMT

ಕಲಬುರಗಿ : ಹೊಸದಾಗಿ ಹರಡುತ್ತಿರುವ ಹ್ಯೂಮನ್ ಮೇಟಾನ್ಯುಮೋ ವೈರಸ್ ( HMPV)ನಿಂದಾಗಿ ರಾಜ್ಯದ ಜನರು ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ತುರ್ತು ಸುದ್ಧಿಗೋಷ್ಠಿ ಕರೆದು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ, ಅದರಲ್ಲಿ 3 ತಿಂಗಳ ಮಗು ಈಗಾಗಲೇ ಡಿಸ್ಚಾರ್ಜ್ ಆಗಿದೆ, 8 ತಿಂಗಳ ಮಗು ಚೇತರಿಸಿಕೊಳ್ಳುತ್ತಿದೆ, ಹಾಗಾಗಿ ವೈರಸ್ ಹರಡುವುದಕ್ಕಿಂತ ಮುಂಚೆಯೇ ಅದನ್ನು ತಡೆಯಲು ನಾವು ಎಲ್ಲಾ ರೀತಿಯಲ್ಲಿ ತಯಾರಿಯಲ್ಲಿದ್ದೇವೆ. ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿದರು.

HMPV ವೈರಸ್ ತಡೆಗಟ್ಟಲು ಮುಂಜಾಗೃತೆಗಾಗಿ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ, ಸಿರಿಯಸ್ ಪ್ರಕರಣಗಳು ಕಂಡುಬಂದಲ್ಲಿ ಮಲ್ಟಿಪ್ಲೆಕ್ಸ್ ಪಿಸಿಆರ್ ಟೆಸ್ಟ್ ಮಾಡುವುದಕ್ಕೂ ನಮ್ಮಲ್ಲಿ ಸೌಲಭ್ಯವಿದೆ. ಅವಶ್ಯಕತೆ ಇದ್ದಲ್ಲಿ ಮಾತ್ರ ಈ ಪರೀಕ್ಷೆ ನಡೆಸಲಾಗುವುದು. ಇದಕ್ಕೆ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದರು.

ಕೋವಿಡ್ ಸೋಂಕಿನಂತೆ ಈ ವೈರಸ್ ಕೂಡ ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಮತ್ತಿತರ ಲಕ್ಷಣಗಳಿಂದ ಕೂಡಿದ್ದು, ಈ ತರಹದ ಲಕ್ಷಣಗಳು ಕಂಡು ಬಂದಲ್ಲಿ ಸೋಂಕಿತರು ಸ್ವಯಂ ಐಸೋಲೇಶ್ ನ್ ಗೆ ಒಳಗಾಗಬೇಕು. ಒಂದು ವೇಳೆ ಅವಶ್ಯ ಬಿದ್ದರೆ ಮನೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನೆಗಡಿ, ಕೆಮ್ಮು ಮತ್ತಿತರ ಪ್ರಾಥಮಿಕ ಸೋಂಕಿನ ಲಕ್ಷಣಗಳು ಇದ್ದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸೋಂಕಿತರು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೋಗುವುದನ್ನು ಕಡಿಮೆ ಮಾಡಬೇಕು. ಮನೆಯಲ್ಲೇ ಚಿಕಿತ್ಸೆ ಪಡೆಯಬೇಕು.

ಡಾ.ಶರಣಪ್ರಕಾಶ್ ಪಾಟೀಲ್ (ವೈದ್ಯಕೀಯ ಶಿಕ್ಷಣ ಸಚಿವರು)

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News