ಕಲಬುರಗಿ | ಸಂವಿಧಾನ ಕೊಡುಗೆ ನೀಡಿದ ಡಾ.ಅಂಬೇಡ್ಕರ್ ಅಜರಾಮರ : ಪಿ.ಎಸ್.ಮೇತ್ರಿ

Update: 2024-12-07 11:33 GMT

ಕಲಬುರಗಿ : ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅಜರಾಮರರಾಗಿದ್ದಾರೆ ಎಂದು ಉಪನ್ಯಾಸಕ ಪಿ.ಎಸ್.ಮೇತ್ರಿ ಹೇಳಿದ್ದಾರೆ.

ಶಹಾಬಾದ್ ಸಮೀಪದ ರಾವೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ತಾವು ನೀಡಿದ ಸಂವಿಧಾನದ ಮೂಲಕ ಪ್ರತಿಯೊಬ್ಬ ಭಾರತೀಯರ ಮನದಲ್ಲಿ ತಲುಪಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ ಕೆಳವರ್ಗದವರ ಬದುಕು ಶೋಚನೀಯವಾಗಿತ್ತು. ಈ ಅವಕಾಶ ವಂಚಿತ ಸಮುದಾಯದ ಧ್ವನಿಯಾಗಿ ಅಂಬೇಡ್ಕರ್ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಎಲ್ಲಾ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಹಾಗೂ ಹಕ್ಕುಗಳ ರಕ್ಷಣೆಗಾಗಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ತಮ್ಮ ಬದುಕಿನ ಉದ್ದಕ್ಕೂ ಓದು- ಬರಹಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು. ಜಗತ್ತಿನ ಸುಮಾರು 48 ದೇಶಕ್ಕಿಂತ ಹೆಚ್ಚು ಸಂವಿಧಾನವನ್ನು ತಿಳಿದುಕೊಂಡಿದ್ದರು ಹಾಗೂ ಭಾರತ ದೇಶದ ಸಂವಿಧಾನವನ್ನು ಬರೆದು ವಿಶ್ವದಲ್ಲಿಯೇ ಮಾದರಿ ಸಂವಿಧಾನ ಎಂದು ಮಾಡಿದ್ದಾರೆ ಅದರಲ್ಲಿ ಸರ್ವರಿಗೆ ಸಮಾನತೆ ಬಯಸಿದ್ದಾರೆ ಎಂದರು.

ಪ್ರಾoಶುಪಾಲ ಶಶಿಧರ್ ಸೋನಾರಕರ್ ಮಾತನಾಡಿ, ಈ ದೇಶದ ಶೋಷಿತರ ಬಾಳಿನ ಭಾಗ್ಯದ ಬೆಳಕು ಯಾರಾದರೂ ಇದ್ದರೇ ಅದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಎಂದರು.

ಈ ಸಂದರ್ಭದಲ್ಲಿ ವಸತಿ ನಿಲಯ ಪಾಲಕರಾದ ಬಸಪ್ಪ ತಳವಾರ್, ವಿಜಯಲಕ್ಷ್ಮಿ ಮಠ, ಭೀಮಾಶಂಕರ್ ಇಂಗಳೆ, ಡಾ.ನಿತಿನ್ ಸಿಂಗ್, ಸಿದ್ದು ಬರಮ ಶೆಟ್ಟಿ, ಮಹಾಲಿಂಗ ನಾಯಕ್, ಪ್ರದೀಪ್ ಕವಡೆ, ಲಿಯಾಕತ್ ಅಲಿಖಾನ್, ಸುರೇಖಾ ಮೇತ್ರಿ, ಶಬನ ಬೇಗಮ್, ಅಶ್ವಿನಿ ಬಸನೂರ, ತೇಜಸ್ವಿನಿ, ಸುವರ್ಣ, ಫಾತಿಮ ಕಾನಂ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News