ಉನ್ನತ ಶಿಕ್ಷಣದ ಕಾರ್ಯಕ್ಷಮತೆಗೆ ನ್ಯಾಷನಲ್ ಅಸೆಸ್ಮೆಂಟ್, ಅಕ್ರೆಡಿಟೇಶನ್ ಕೌನ್ಸಿಲ್ ಬೈನರಿ ಪೂರಕ : ಡಾ.ಧರ್ಮಾಧಿಕಾರಿ

Update: 2024-12-17 09:55 GMT

ಕಲಬುರಗಿ : "New Methodology Of NAAC Binary Accreditation" ವಿಧಾನವು ಶೈಕ್ಷಣಿಕ ಸಂಸ್ಥೆಗಳ ಮೌಲ್ಯಮಾಪನವನ್ನು ಅತ್ಯಂತ ವೈಜ್ಞಾನಿಕ ಮತ್ತು ಸಮಗ್ರವಾಗಿ ಮಾಡುವ ಮೂಲಕ, ಉನ್ನತ ಶಿಕ್ಷಣ ಕ್ಷೇತ್ರದ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯಮಾಡುತ್ತದೆ ಎಂದು ನ್ಯಾಕ್ ಯುಜಿಸಿ ಕಮೀಟಿ ಸದಸ್ಯ ಡಾ.ಧರ್ಮಾಧಿಕಾರಿ ಎನ್.ಎಸ್. ಅವರು ಹೇಳಿದ್ದಾರೆ.

ಆಳಂದ ಪಟ್ಟಣದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಠಾಪಿತ ಎ.ವಿ.ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ "New Methodology Of NAAC Binary Accreditation" ವಿಷಯದ ಕುರಿತಾಗಿ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

"NAAC Binary Accreditation" ಪದ್ಧತಿ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಸುಧಾರಿಸಲು ಮತ್ತು ದೇಶಾದ್ಯಾಂತ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿದೆ. ಈ ಪದ್ಧತಿಯು, ಬೋಧನೆ, ಮೂಲಸೌಕರ್ಯ, ಹಾಗೂ ಆಡಳಿತಕ್ಕೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ಹೊಂದಿರುವುದರಿಂದ, ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ತಮ್ಮ ಗುಣಮಟ್ಟ ಮೌಲ್ಯಮಾಪನ ಮಾಡುವಲ್ಲಿ ಹೆಚ್ಚು ತತ್ಪರವಾಗಿ ಸ್ಪರ್ಧಾತ್ಮಕಗೊಳ್ಳಲು ನೆರವಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಎಚ್.ಹೊಸಮನಿ ಅವರು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವರ್ಗವು NAAC ಮೌಲ್ಯಮಾಪನಕ್ಕಾಗಿ ಸೂಕ್ತವಾದ ತಯಾರಿಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆಗಳನ್ನು ಹಂಚಿಕೊoಡರು.

ವೇದಿಕೆಯಲ್ಲಿ ಡಾ.ರಮೇಶ್ ಮಸರುಬೋ, ಡಾ.ರಾಜಶೇಖರ್ ಬಾಬುನೂರ್, ಡಾ.ವೆಂಕಟೇಶ್ ಪೂಜಾರಿ, ಮತ್ತು ಡಾ.ಟೀಕಪ್ಪ ಉಪಸ್ಥಿತರಿದ್ದರು. ಶ್ರೀಮತಿ ಸಂಗೀತ ಅಷ್ಟಗಿ ಪ್ರಾರ್ಥನಾ ಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಆರಂಭಿಸಿದರು. ಡಾ.ಬಬ್ರುವಾಹನ ನಿರೂಪಣೆ ಮಾಡಿ, ಡಾ.ಜೈಪ್ರಕಾಶ್ ಬಾವಿಮನಿ ವಂದಿಸಿದರು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿ ಉಪನ್ಯಾಸದ ಮಹತ್ವವನ್ನು ಗ್ರಹಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News