ಈಶ್ವರಪ್ಪ ಅವರ ಮಾತಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ: ಪ್ರಿಯಾಂಕ್ ಖರ್ಗೆ

Update: 2024-02-10 06:37 GMT

Photo: fb.com/PriyankMKharge

ಕಲಬುರಗಿ: ಗುಂಡು ಹಾಕಿ ಕೊಲ್ಲುವ ಕಾನೂನು ತರಬೇಕೆಂಬ ಮಾಜಿ ಡಿಸಿಎಂ ಈಶ್ವರಪ್ಪ ಅವರ ಹೇಳಿಕೆ  ಅವರ ವಿವೇಕತನ ಎಷ್ಟಿದೆ ಎಂದು ತೊರಿಸಿಕೊಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ರೆಕಾರ್ಡ್ ರೂಂ ಡಿಜಿಟೈಲೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಈಶ್ವರಪ್ಪ ಅವರಿಗೆ ಪಕ್ಷದಲ್ಲಿ ಇನ್ ವಾಲೆಂಟ್ರಿ ರಿಟೈರ್ಮೆಂಟ್ ಸಿಕ್ಕಿದೆ. ಪಕ್ಷದಲ್ಲಿ ಮಾರ್ಗದರ್ಶಕ ಮಂಡಲ್ಲದಲ್ಲಿಯೂ ಅವರಿಗೆ ಅವಕಾಶ ಸಿಕ್ಕಲ್ಲ ಅವರ ಮಾತನ್ನು ಗಂಭೀರ ತೆಗೆದುಕೊಳ್ಳುವ ಅಗತ್ಯ ವಿಲ್ಲ ಎಂದು ಹೇಳಿದರು.

ಹತ್ತು ವರ್ಷಗಳಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ವಿರುದ್ಧ ಕೈಜೊಡಿಸುವುದನ್ನು ಬಿಟ್ಟು ಬಿಜೆಪಿಯವರು ಮೋದಿ ಅವರ ಗುಲಾಮರಾಗಿ ಮಾತನಾಡುತ್ತಿದ್ದಾರೆ. ಏನು ಮಾಡಕ್ಕಾಗಲ್ಲ. ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರ ಕನ್ನಡಿಗರಿಗೆ ಏನು ಮಾಡಿದೆ ಎಂಬ ಪಟ್ಟಿ ಕೊಡಲಿ ಎಂದು ಹೇಳಿದರು.

ಕೇಂದ್ರ ಸರಕಾರ ಪಾರ್ಲಿಮೆಂಟಿನಲ್ಲಿ ರಾಜಕೀಯ ಭಾಷಣ ಮಾಡುವಾಗ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತಾಡಲ್ಲ. ನೆಹರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಈಗ ಖರ್ಗೆ ಅವರ ಹೆಸರನ್ನು ಹೇಳಿಕೊಂಡು ಭಾಷಣ ಮಾಡುತ್ತಾರೆ. ಇದು ಅವರ ಹತ್ತು ವರ್ಷದ ಸಾಧನೆ ಏನು ಎಂಬುದನ್ನು ತೋರಿಸಿಕೊಡುತ್ತದೆ ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News