ಎ.16ರಂದು ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ : ಕೆಕೆಆರ್‌ಟಿಸಿ ನಿಗಮದಿಂದ 292 ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ : ಎಂ.ರಾಚಪ್ಪ

ಎಂ.ರಾಚಪ್ಪ
ಕಲಬುರಗಿ : ಕಲಬುರಗಿಯ ಕೆಸಿಟಿ ಕಾಲೇಜಿನ ಆವರಣದಲ್ಲಿ ಎ.16 ರಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಡದ ಬೃಹತ್ ಉದ್ಯೋಗ ಮೇಳ-ಯುವ ಸಮೃದ್ಧಿ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಉದ್ಯೋಗ ಮೇಳದಲ್ಲಿ ಭಾಗವಹಿಸಲಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಾಕಾಂಕ್ಷಿಗಳು ಅಯಾ ಜಿಲ್ಲೆಯಿಂದ ಕಲಬುರಗಿಗೆ ಆಗಮಿಸಲು ನಿಗಮದಿಂದ ಒಟ್ಟು 292 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ತಿಳಿಸಿದ್ದಾರೆ.
ಎ.16 ರಂದು ಪ್ರದೇಶದ ಕಲಬುರಗಿ ವಿಭಾಗ-1 ಮತ್ತು 2 ರಿಂದ 105, ಯಾದಗಿರಿ ವಿಭಾಗದಿಂದ 37, ಬೀದರ್ ವಿಭಾಗದಿಂದ 46, ರಾಯಚೂರು ವಿಭಾಗದಿಂದ 32 ಬಸ್ ಗಳು ಹೆಚ್ಚುವರಿ ಕಾರ್ಯಚರಣೆ ಮಾಡಲಿವೆ. ಎ.15ರ ಸಂಜೆ ಕೊಪ್ಪಳ ವಿಭಾಗದಿಂದ 18, ಬಳ್ಳಾರಿ ಮತ್ತು ಹೊಸಪೇಟೆ ವಿಭಾಗದಿಂದ ತಲಾ 12 ಬಸ್ ಗಳು ಕಾರ್ಯಚರಣೆ ಮಾಡಲಿವೆ. ಇದಲ್ಲದೆ ಎ.16 ರಂದು ಕೊಪ್ಪಳ, ಬಳ್ಳಾರಿ ಹಾಗೂ ಹೊಸಪೇಟೆ ವಿಭಾಗದಿಂದ ಬೆಳಗ್ಗಿನ ನಸುಕಿನ ಜಾವದಲ್ಲಿ ತಲಾ 10 ಹೆಚ್ಚುವರಿ ಬಸ್ ಗಳು ಕಲಬುರಗಿಯತ್ತ ಪ್ರಯಾಣಸಲಿದ್ದು, ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಇದರ ಲಾಭ ಪಡೆಯಬೇಕೆಂದು ಅವರು ಕೋರಿದ್ದಾರೆ.
ಕಲಬುರಗಿ ವಿಭಾಗ-1ರ ವ್ಯಾಪ್ತಿಯ ಕಲಬುರಗಿ ಘಟಕ-1ರ ನಗರ ಸಾರಿಗೆಯ 15 ಬಸ್ ಗಳು ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿ 5 ನಿಮಿಷಕ್ಕೊಂದರಂತೆ ಉದ್ಯೋಗ ಮೇಳ ಜರುಗುವ ಸ್ಥಳವಾದ ಕೆಸಿಟಿ ಕಾಲೇಜಿಗೆ ಹಾಗೂ 8 ಬಸ್ ಗಳು ರೈಲ್ವೆ ನಿಲ್ದಾಣದಿಂದ ರೈಲ್ವೆ ಬರುವ ಸಮಯಕ್ಕೆ ಅಲ್ಲಿಂದ ಹೊರಟು ಉದ್ಯೋಗ ಮೇಳ ಜರುಗುವ ಸ್ಥಳಕ್ಕೆ ಹೋಗಲಿವೆ. ಕಾಳಗಿ ಘಟಕದಿಂದ 8, ಕಮಲಾಪೂರ ಘಟಕದಿಂದ 6, ಚಿಂಚೋಳಿ ಚಿತ್ತಾಪೂರ, ಜೇವರ್ಗಿ, ಅಫಜಲಪೂರ ಘಟಕದಿಂದ ತಲಾ 10 ಬಸ್‍ಗಳು, ಸೇಡಂ ಮತ್ತು ಅಳಂದ ಘಟಕಗಳಿಂದ ತಲಾ 12 ಬಸ್‍ಗಳು ಹಾಗೂ ಯಡ್ರಾಮಿ ಘಟಕದಿಂದ 4 ಹೆಚ್ಚುವರಿ ಬಸ್‍ಗಳು ಬೆಳಿಗ್ಗೆ 6 ಗಂಟೆಯಿಂದ ಪ್ರತಿ 15 ನಿಮಿಷಕ್ಕೊಂದರಂತೆ ಉದ್ಯೋಗ ಮೇಳ ನಡೆಯುವ ಸ್ಥಳಕ್ಕೆ ಪ್ರಯಾಣ ಮಾಡಲಿವೆ.
ಯಾದಗಿರಿ ವಿಭಾಗದ ವ್ಯಾಪ್ತಿಯ ಯಾದಗಿರಿ ಘಟಕದ 12 ಬಸ್ ಮತ್ತು ಗುರುಮಟಕಲ್ ಘಟಕದ 5 ಬಸ್ ಗಳು ಬೆಳಿಗ್ಗೆ 5 ಗಂಟೆಯಿಂದ ಪ್ರತಿ ಅರ್ಧ ಗಂಟೆಗೊಂದರಂತೆ, ಶಹಾಪುರ ಮತ್ತು ಸುರಪುರ ಘಟಕದಿಂದ ತಲಾ 10 ಬಸ್‍ಗಳು ಬೆಳಿಗ್ಗೆ 6 ಗಂಟೆಯಿಂದ ಪ್ರತಿ 15 ನಿಮಿಷಕ್ಕೊಂದರಂತೆ ಕಾರ್ಯಾಚರಣೆ ಮಾಡಲಿವೆ.
ಬೀದರ್ ವಿಭಾಗದ ವ್ಯಾಪ್ತಿಯ ಔರಾದ ಮತ್ತು ಭಾಲ್ಕಿ ಘಟಕದಿಂದ ತಲಾ 4 ಬಸ್ ಗಳಿ ಬೆಳಿಗ್ಗೆ 5 ಗಂಟೆಯಿಂದ 6.30 ಗಂಟೆ ವರೆಗೆ ಪ್ರತಿ ಅರ್ಧ ಗಂಟೆಗೊಮ್ಮೆ, ಬೀದರ ಘಟಕದಿಂದ 18 ಮತ್ತು ಹುಮನಾಬಾದ ಘಟಕದಿಂದ 12 ಬಸ್‍ಗಳು ಬೆಳಿಗ್ಗೆ 5 ಗಂಟೆಯಿಂದ ಪ್ರತಿ 15 ನಿಮಿಷಕ್ಕೊಂದರಂತೆ ಹಾಗೂ ಬಸವಕಲ್ಯಾಣ ಘಟಕದಿಂದ 8 ಬಸ್‍ಗಳು ಬೆಳಿಗ್ಗೆ 5 ಗಂಟೆಯಿಂದ ಪ್ರತಿ ಅರ್ಧ ಗಂಟೆಗೊಂದರಂತೆ ಕಾರ್ಯಾಚರಣೆ ಮಾಡಲಿವೆ.
ರಾಯಚೂರು ವಿಭಾಗದ ವ್ಯಾಪ್ತಿಯ ರಾಯಚೂರು ಘಟಕದಿಂದ 9-ಬಸ್‍ಗಳು ಬೆಳಗ್ಗೆ 5 ಗಂಟೆಯಿಂದ ಪ್ರತಿ 15 ನಿಮಿಷಕ್ಕೆ ಒಂದರಂತೆ ಕಲಬುರಗಿಗೆ ಕಾರ್ಯಡಚರಣೆ ಮಾಡಲಿವೆ. ಇನ್ನು ಲಿಂಗಸೂಗೂರು ಮತ್ತು ಸಿಂಧನೂರು ಘಟಕಗಳಿಂದ ತಲಾ 5, ಮಾನ್ವಿ ಘಟಕದಿಂದ 6, ದೇವದುರ್ಗ ಘಟಕದಿಂದ-4 ಹಾಗೂ ಮಸ್ಕಿ ಘಟಕದಿಂದ 3 ಬಸ್‍ಗಳು ಪ್ರತಿ ಅರ್ಧ ಗಂಟೆಗೊಂದರಂತೆ ಕಾರ್ಯಾಚರಣೆ ಮಾಡಲಿವೆ.
ಕೊಪ್ಪಳ ವಿಭಾಗದ ವ್ಯಾಪ್ತಿಯ ಕೊಪ್ಪಳ ಘಟಕದಿಂದ ಎ.15 ರಂದು 5 ಬಸ್ ಗಳು ಸಂಜೆ 5 ರಿಂದ 7 ಗಂಟೆ ವರೆಗೆ, ಕುಷ್ಟಗಿ ಮತ್ತು ಗಂಗಾವತಿ ಘಟಕದಿಂದ ತಲಾ 4 ಬಸ್ ಗಳು ಸಂಜೆ 5 ರಿಂದ 6.30 ಗಂಟೆ ವರೆಗೆ, ಯಲಬುರ್ಗಾ ಘಟಕದಿಂದ 3 ಬಸ್ ಗಳು ಸಂಜೆ 5 ರಿಂದ 6 ಗಂಟೆ ವರೆಗೆ, ಕುಕನೂರು ಘಟಕದಿಂದ 2 ಬಸ್ ಗಳು ಸಂಜೆ 5 ಮತ್ತು 5.30 ಗಂಟೆಗೆ ಹೆಚ್ಚುವರಿ ಕಾರ್ಯಾಚರಣೆ ಮಾಡಲಾಗುತ್ತದೆ. ಇದಲ್ಲದೆ ಎ.16 ರಂದು ಬೆಳಿಗ್ಗೆ 4 ಗಂಟೆಗೆ ಕೊಪ್ಪಳ, ಕುಷ್ಠಗಿ, ಯಲಬುರ್ಗಾ, ಕುಕನೂರು ಹಾಗೂ ಗಂಗಾವತಿ ಘಟಕಗಳಿಂದ ತಲಾ 2 ಬಸ್‍ಗಳು ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದೆ.
ಬಳ್ಳಾರಿ ವಿಭಾಗದಿಂದ ಎ.15 ರಂದು ಬಳ್ಳಾರಿ ಘಟಕದಿಂದ ಸಂಜೆ 7 ರಿಂದ 8.30 ಗಂಟೆ ವರೆಗೆ ಪ್ರತಿ ಅರ್ಧ ಗಂಟೆಗೆ ಒಂದರಂತೆ 4 ಬಸ್ ಗಳು, ಕಂಪ್ಲಿ ಘಟಕದಿಂದ ಸಂಜೆ7 ಮತ್ತು 7.30 ಗಂಟೆಗೆ 2 ಬಸ್ ಗಳು, ಸಿರಗುಪ್ಪ ಘಟಕದಿಂದ ರಾತ್ರಿ 8.30 ಮತ್ತು 9 ಗಂಟೆಗೆ 2 ಬಸ್, ಕುರಗೋಡ ಘಟಕದಿಂದ ಸಂಜೆ 6 ಮತ್ತು 6.30 ಗಂಟೆಗೆ 2 ಬಸ್ ಹಾಗೂ ಸಂಡೂರು ಘಟಕದಿಂದ ರಾತ್ರಿ 8 ಮತ್ತು 8.30 ಗಂಟೆಗೆ 2 ಬಸ್‍ಗಳು ಕಲಬುರಗಿಯತ್ತ ಕಾರ್ಯಾಚರಣೆ ಮಾಡಲಿವೆ. ಇದಲ್ಲದೆ ಎ.16 ರಂದು ಸಹ ಬೆಳಿಗ್ಗೆ 4 ಗಂಟೆಗೆ ಬಳ್ಳಾರಿ, ಕಂಪ್ಲಿ, ಸಿರಗುಪ್ಪ, ಕುರಗೋಡ ಮತ್ತು ಸಂಡೂರು ಘಟಕಗಳಿಂದ ತಲಾ 2 ಬಸ್ ಗಳು ವಿಶೇಷ ಕಾರ್ಯಾಚರಣೆ ಮಾಡಲಾಗುತ್ತದೆ.
ಹೊಸಪೇಟೆ ವಿಭಾಗದಿಂದ ಎ.15 ರಂದು ಸಂಜೆ ಸಮಯದಲ್ಲಿ ಹೊಸಪೇಟೆ ಘಟಕದಿಂದ 4, ಕೂಡ್ಲಿಗಿ, ಹಡಗಲಿ, ಹೆಚ್.ಬಿ. ಹಳ್ಳಿ ಮತ್ತು ಹರಪನಹಳ್ಳಿ ಘಟಕಗಳಿಂದ ತಲಾ 2 ಹೆಚ್ಚುವರಿ ಬಸ್‍ಗಳು ಕಲಬುರಗಿಗೆ ಕಾರ್ಯಾಚರಣೆ ಮಾಡಲಿವೆ. ಇದರ ಜೊತೆಗೆ ಎ.16 ರಂದು ಬೆಳಿಗ್ಗೆ 4 ಗಂಟೆಗೆ ಹೊಸಪೇಟೆ, ಕೂಡ್ಲಗಿ, ಹಡಗಲಿ, ಹೆಚ್.ಬಿ.ಹಳ್ಳಿ ಹಾಗೂ ಹರಪನಹಳ್ಳಿ ಘಟಕದಿಂದ ತಲಾ 2 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಿವೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.