ಕಲಬುರಗಿ | ಫಿರೋಝಾಬಾದ್ ಪಿಕೆಪಿಎಸ್ ಗೆ 11 ನಿರ್ದೇಶಕರ ಅವಿರೋಧ ಆಯ್ಕೆ
ಕಲಬುರಗಿ: ತಾಲೂಕಿನ ಫಿರೋಝಾಬಾದ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಕೆಪಿಎಸ್)ದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ 2025-30ನೇ ಸಾಲಿನ ಐದು ವರ್ಷಗಳ ಅವಧಿಗಾಗಿ ನಡೆದ ಚುನಾವಣೆಯಲ್ಲಿ 11 ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಿಕೆಪಿಎಸ್ ಕೇಂದ್ರದಲ್ಲಿ ಸೋಮವಾರ ನಾಮಪತ್ರ ವಾಪಸ್ ಪಡೆಯುವ ಕೊನೆ ದಿನವಾಗಿದ್ದರಿಂದ ಅಂತಿಮವಾಗಿ ಕಣದಲ್ಲಿ ಉಳಿದ 12 ಸ್ಥಾನಗಳ ಪೈಕಿ 11 ಜನ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಕೃಷ್ಣ ಮೂರ್ತಿ ಘೋಷಿಸಿದರು.
ಅಣವೀರಪ್ಪ ಶರಣಪ್ಪ ಶಿರೂರ ಮಲ್ಲಣ್ಣ ಗೌಡ ಅಣ್ಣಾರಾಯ, ಬಸವರಾಜ ಶರಣಪ್ಪ, ಸಿದ್ರಾಮಪ್ಪ ಶಿವಬಸಪ್ಪ, ರಾಮಣ್ಣ ಮಲ್ಲಪ್ಪ ನೇಲೋಗಿ, ಉಮೇಶ ಶಿವಯೋಗಪ್ಪ ಮಾಮನಿ, ಬಸವಲಿಂಗ ಸಿದ್ರಾಮಪ್ಪ ಹಾಲು, ಶ್ರೀಮಂತ ಬಸಣ್ಣ ಪೂಜಾರಿ, ಎಂಡಿ ಅಲೀಂ ಆದಾಮಸಾಬ, ಲಕ್ಷ್ಮಿ ಬಾಯಿ ಮಲ್ಲಿಕಾರ್ಜುನ ಧೂಳಬಾ, ಸರಸ್ವತಿ ನಿಂಗಣ್ಣ ಪೂಜಾರಿ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜಯೋತ್ಸವ: ನೂತನ ನಿರ್ದೇಶಕರು ಆಯ್ಕೆಗೊಳ್ಳುತ್ತಿದ್ದಂತೆ ಧೂಳಬಾ ಕುಟುಂಬ ವತಿಯಿಂದ ತಾಪಂ ಮಾಜಿ ಸದಸ್ಯರಾದ ಅಬ್ದುಲ್ ಲತೀಫ್ ಜಹಾಗೀರದಾರ್, ಶರಣಗೌಡ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಧೂಳಬಾ, ಉಮೇಶ ಮಾಮನಿ, ಶರಣಬಸು ಹಡಪದ, ಖಾಜಾಬಾಯ್ ಪಟೇಲ್, ರಾಜು ಭರ್ಮಾ, ಕಾರ್ಯದರ್ಶಿ ಗುರು ಹಡಪದ ಸೇರಿ ಅನೇಕರು ಭಾಗವಹಿಸಿ ಸಂಭ್ರಮಾಚರಣೆ ನಡೆಸಿದರು.