ಕಲಬುರಗಿ | ಲಾರಿ- ಬೈಕ್ ನಡುವೆ ಢಿಕ್ಕಿ : ಹಿಂಬದಿ ಸವಾರೆ ಮೃತ್ಯು
Update: 2024-12-17 09:19 GMT
ಕಲಬುರಗಿ : ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್ ಸಹಸವಾರೆ ಮೃತಪಟ್ಟಿರುವ ಘಟನೆ ಹುಮ್ನಾಬಾದ್ ರಿಂಗ್ ರೋಡ್ ಕಾಕಡೆ ಚೌಕ್ ಹತ್ತಿರ ಸೋಮವಾರ ಸಂಜೆ ನಡೆದಿದೆ.
ಬೈಕ್ ಹಿಂಬದಿ ಕುಳಿತಿದ್ದ ರಾಜಾಪುರ ನಿವಾಸಿ ರೇಣುಕಾ ರಾಜಕುಮಾರ್ ನಡುವಿನಮನಿ(40) ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಸುಭಾಷ್ ಬಾಬು ದೊಡ್ಡಮನಿ(50) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಕಲಬುರಗಿ ಸಂಚಾರಿ - 2 ಠಾಣೆ ಪ್ರಕರಣದಲ್ಲಿ ದಾಖಲಾಗಿದೆ.