ಕಲಬುರಗಿ | ಯುಗಾದಿ ಹಬ್ಬಕ್ಕೆ 24x7 ಗಂಟೆ ನೀರು ಸರಬರಾಜು : ಕುಮಾರಸೇನಾ

ಕಲಬುರಗಿ : ವಾಟರ್ ಬೋರ್ಡ್ದಿಂದ ನೀರಿನ ಪೈಪಲೈನ್ ಕ್ರಮಬದ್ಧವಾಗಿ ಹಾಕದೇ ಇರುವುದರಿಂದ ಎಲ್ & ಟಿ ಯವರು ನಾವು ಚಾರ್ಜ್ ತೆಗೆದುಕೊಂಡ ಮೇಲೆ ಅನೇಕ ಬಡಾವಣೆಗಳಲ್ಲಿ ಪೈಪ್ ಲೈನ್‌ಗಳ ವ್ಯವಸ್ಥೆ ಸುಧಾರಿಸಿದ್ದು, ವಾರ್ಡ್ ನಂ. 32ರಲ್ಲಿ 90 ಪ್ರತಿಶತ ಪೈಪಲೈನ್ ಪೂರ್ಣಗೊಂಡಿದ್ದು ಸಾಧ್ಯವಾದರೇ ಯುಗಾದಿ ಹಬ್ಬಕ್ಕೆ ಅಥವಾ ಏ.15 ರ ಒಳಗಡೆ ವಿದ್ಯಾನಗರಕ್ಕೆ 24x7 ನೀರು ಸರಬರಾಜು ಪ್ರಾರಂಭ ಮಾಡುತ್ತೇವೆಂದು ಎಲ್ & ಟಿ ಜಿ.ಎಂ ಜನರಲ್ ಮ್ಯಾನೇಜರ್ ಕುಮಾರಸೇನಾ ಭರವಸೆ ನೀಡಿದರು.
ಮಳೆಗಾಲದಲ್ಲಿ ಪ್ರಾರಂಭವಾದ ಎಲ್ & ಟಿ ಪೈಪ್ ಲೈನ್ ರಸ್ತೆಯ ಅನೇಕ ಕಡೆ ಕೆದರಿ ಹಾಗೆ ಬಿಟ್ಟಿದ್ದು, ಮಳೆಗಾಲದಲ್ಲಿ ಜನರು ಬಹಳ ತೊಂದರೆ ಅನುಭವಿಸಿದ್ದು, ನಾವು ನಮ್ಮ ನಮ್ಮ ಮನೆಯ ಎದುರುಗಡೆ ಕೆದರಿದ ತಗ್ಗು-ಗುಂಡಿಗಳು ಸರಿಪಡಿಸಿಕೊಂಡಿರುವ ಸಾಮಾಜಿಕ ಕಳಕಳಿಯಿಂದ ಹೊಸ ವರ್ಷ ಯುಗಾದಿ ಹಬ್ಬಕ್ಕೆ ನೀರು ಬಿಡಲೇಬೇಕು ಎಂಬ ಆಗ್ರಹದೊಂದಿಗೆ ಹಾಗೂ 8 ದಿನಕ್ಕೊಮ್ಮೆ ಬಿಡುವ ನೀರು ಸಮಯ ಸರಿಯಾಗಿ ನಿಗದಿಪಡಿಸಿರುವುದಿಲ್ಲ. ಹೀಗೆ ಅನೇಕ ನೀರಿನ ಸಮಸ್ಯೆಗಳ ಕುರಿತು ವಿದ್ಯಾನಗರ ವೆಲ್ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಯವರು ಗ್ರಾಹಕರ ಸಮಾಲೋಚನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಒಂದು ವೇಲೆ ಯುಗಾದಿ ಹಬ್ಬಕ್ಕೆ ನೀರು ಸರಬರಾಜು ವ್ಯವಸ್ಥೆ ಆಗದೆ ಇದ್ದ ಪಕ್ಷದಲ್ಲಿ ವಿದ್ಯಾನಗರಕ್ಕೆ ಟ್ಯಾಂಕರ್ ಮೂಲಕ ನೀರು ವ್ಯವಸ್ಥೆ ಮಾಡಲಾಗುವುದೆಂದು ಎಲ್ & ಟಿ ಸೋಶಿಯಲ್ ಎಕ್ಸ್ಪರ್ಟ ಲಿಂಗರಾಜ ಹೀರಾ ಭರವಸೆ ನೀಡಿದರು.
ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಪಂಪ್ ಆಪರೇಟರ ಸುಧಾಕರ, ಕಾಲೋನಿ ಹಿರಿಯರಾದ ಕಾಶೀನಾಥ ಚಿನಮಳ್ಳಿ, ಜಗದೇವ ಗುತ್ತೇದಾರ, ಗುರುಲಿಂಗಯ್ಯ ಮಠಪತಿ, ನಾಗರಾಜ ಹೆಬ್ಬಾಳ, ತರುಣಶೇಖರ ಬಿರಾದಾರ, ರಮೇಶ ದಸಮಾ, ಶಾಂತಯ್ಯ ಬೀದಿಮನಿ, ಉದಯಕುಮಾರ ಪಡಶೆಟ್ಟಿ, ಜಯಪ್ರಕಾಶ ಕೊಟ್ಟರಕಿ, ಶಿವರಾಜ ಪಾಟೀಲ ಮಾಡ್ಯಾಳ, ಶರಣಯ್ಯ ಮಠಪತಿ, ಮಲ್ಲಿಕಾರ್ಜುನ ಸಿಂದಗಿ ಮುಂತಾದವರು ಉಪಸ್ಥಿತರಿದ್ದರು.