ಕಲಬುರಗಿ | ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಜಿಲ್ಲಾಧಿಕಾರಿ ಸೂಚನೆ

Update: 2025-03-22 20:12 IST
ಕಲಬುರಗಿ | ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಜಿಲ್ಲಾಧಿಕಾರಿ ಸೂಚನೆ
  • whatsapp icon

ಕಲಬುರಗಿ : ಆಳಂದ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮಗಳಿಗೆ ತುರ್ತು ಮತ್ತು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನಮ್ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಭಂವರಸಿಂಗ್ ಮೀನಾ ಶನಿವಾರ ಸ್ಥಳೀಯ ಅಧಿಕಾರಿಗಳ ಜೊತೆ ಹಲವಡೆ ಜಂಟಿ ಭೇಟಿ ನೀಡಿ ಸಮಗ್ರ ಅಧ್ಯಯನ ನಡೆಸಿದರು.

ಈ ಸಂದರ್ಭದಲ್ಲಿ ಉಲ್ಲೇಖಿಸಿದ ಅವರು, ಆಳಂದ ಮತ್ತು ಅಫಜಲಪೂರ ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿತದಿಂದಾಗಿ ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಸರ್ಕಾರದ ನೀರಿನ ಮೂಲ ಬತ್ತಿಹೋಗಿದ್ದರೆ, ಖಾಸಗಿಯವರ ಬಳಿಯಿಂದ ನೀರು ಖರೀದಿಸೆಯಾದರು ಸದ್ಯ ತುರ್ತು ಕ್ರಮ ಕೈಗೊಳ್ಳಿ ಜೊತೆಗೆ ಭವಿಷ್ಯದಲ್ಲಿ ನೀರಿನ ಕೊರತೆಯಾಗದಂತೆ ಸ್ಥಳೀಯ ಜನತೆಯ ಸಹಕಾರದೊಂದಿಗೆ ಶಾಶ್ವತ ಜಲಮೂಲಗಳ ಶೋಧ ನಡೆಸಿ ಶಾಶ್ವತ ನೀರು ಪೂರೈಕೆಯಂತ ಕಾಮಗಾರಿ ಕೈಗೊಳ್ಳಬೇಕು ಎಂದು ಜೊತೆಯಲ್ಲಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ನಿಗಧಿ ಪಡಿಸಿದ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮತ್ತು ಸಿಇಒ ಅವರು ಸ್ಥಳೀಯ ಜನರ ಸಮಸ್ಯೆಗಳು ಆಲಿಸಿದರು, ಅಲ್ಲದೆ ಬೇಡಿಕೆಯ ಕುರಿತಾದ ಭರವಸೆ ನೀಡಿ, ಸಲಹೆ ಸೂಚನೆಗಳು ನೀಡಿದರು. ಪಂಚಾಯತ್‌ ಸಾವಳೇಶ್ವರ್ ವ್ಯಾಪ್ತಿಯ ಕಿಣಿ ಅಬ್ಬಾಸ್, ಅಂಬೆವಾಡ್, ಕೌಲಗಾ ಗ್ರಾಪಂ ವ್ಯಾಪ್ತಿಯ ಝಳಕಿ ಕೆ. ಗ್ರಾಮ, ಸರಸಂಬಾ ಸೇರಿದಂತೆ ಇತರ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿದ ಉದ್ಭವಿಸದ ನೀರಿನ ಸಮಸ್ಯೆ ತುರ್ತು ಕ್ರಮ ಹಾಗೂ ಶಾಶ್ವತ ಪರಿಹಾರಕ್ಕೆ ಅನುಸರಿಸುವಂತ ಕಾರ್ಯದ ಮಾಹಿತಿ ಕಲೆಹಾಕಿದರು.

ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಡಿಸಿ ಮತ್ತು ಸಿಇಒ ಅವರು, ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಹಾಗೂ ಜೆಜೆಎಂ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯನಿರ್ವಹಕ ಅಭಿಯಂತರ ಧನ್ನರಾಜ್ ಲದ್ದೆ, ಎಇಇ ವಿಜಯಕುಮಾರ್ ಗ್ರೇಡ್-2 ತಹಶೀಲ್ದಾರ್‌ ಬಿ.ಜಿ. ಕುದರಿ ಸೇರಿದಂತೆ ಹಿರಿಯ ಅಧಿಕಾರಿಗಳು ಜೊತೆಯಲ್ಲಿದ್ದರು.

ಕಿಣಿ ಅಬ್ಬಾಸ್ ಮತ್ತು ಅಂಬೆವಾಡ್ ಗ್ರಾಮಗಳಲ್ಲಿ ತೆರೆದ ಬಾವಿ ತೋಡಿ ನೀರಿನ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಭಂವರಸಿಂಗ್ ಮೀನಾ ಅವರು, ನೀರಿನ ಮೂಲಗಳನ್ನು ಹುಡುಕಿ ತೆರೆದ ಬಾವಿ ತೋಡುವ ಕಾಮಗಾರಿಗೆ ಮೌಖಿಕ ಅನುಮತಿ ನೀಡಿದರು. ತಾತ್ಕಾಲಿಕವಾಗಿ ಖಾಸಗಿ ಮೂಲಗಳಿಂದ ನೀರು ಖರೀದಿಸಿ ಪೂರೈಸಿ ಎಂದು ಹೇಳಿದರು.

ಆಳಂದ ತಾಲೂಕಿನ ಸರಸಂಬಾ, ಜಳಕಿ ಕೆ, ಅಂಬೆವಾಡ್ ಮತ್ತು ಮಡ್ಡಿ ಶಾಶ್ವತ ಬಡವಣೆಗಳಿಗೆ ಖಾಸಗಿ ನೀರು ಪಡೆದು ಪೂರೈಕೆ ಮಾಡುವಂತೆ ಸಲಹೆ ನೀಡಿದರು. ಕಿಣ್ಣಅಬ್ಬಾಸ ಗ್ರಾಮದಲ್ಲಿ ಈಗಾಗಲೇ ತೊಡಲಾದ ಕೊಳವೆ ಬಾವಿ ಕಾಮಗಾರಿ ಬಾಕಿ ಉಳಿದಿದ್ದು, ಅದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ನೀರು ಪೂರೈಕೆ ಆರಂಭಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

"ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಾರದು. ಸಕಾಲಕ್ಕೆ ಗ್ರಾಮೀಣ ಜನರಿಗೆ ನೀರು ಒದಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಶಾಶ್ವತ ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಬೇಕು," ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸೂಚನೆಗಳು :

ನೀರಿನ ಗುಣಮಟ್ಟ ಪರೀಕ್ಷೆ:

ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು, ಪೂರೈಸುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಅದು ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳುವಂತೆ ಆದೇಶಿಸಿದರು. ಸಮುದಾಯ ಸಹಭಾಗಿತ್ವದೊಂದಿಗೆ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಶಾಶ್ವತ ನೀರಿನ ಯೋಜನೆ ಜಾರಿಗೊಳಿಸುವಂತೆ ಸೂಚಿಸಿದರು.

ಅರಣ್ಯ ಸಂರಕ್ಷಣೆ :

ತೆರೆದ ಬಾವಿ ಅಥವಾ ಕೊಳವೆ ಬಾವಿ ತೋಡುವಾಗ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಕ್ರಮವಹಿಸಬೇಕು. ಈ ಯೋಜನೆಗಳ ಪ್ರಗತಿಯ ಬಗ್ಗೆ ಸಾರ್ವಜನಿಕರಿಗೆ ನಿಯಮಿತವಾಗಿ ಮಾಹಿತಿ ನೀಡುವಂತೆ ಹೇಳಿದರು.

ಶಾಶ್ವತ ಯೋಜನೆ :

ನೀರಿನ ಶಾಶ್ವತ ಪರಿಹಾರಕ್ಕಾಗಿ ಬಜೆಟ್ ರೂಪಿಸಿ ಸರ್ಕಾರದಿಂದ ಅನುದಾನ ಪಡೆಯುವ ಪ್ರಯತ್ನ ಮಡಬೇಕು ಎಂದು ಡಿಸಿ ಸೂಚಿಸಿದ್ದಾರೆ.

ಮಾವಿನ ಕಾಯಿ ಸ್ವಾಗತ :

ಝಳಕಿ ಕೆ. ಗ್ರಾಮದಲ್ಲಿ ಡಿಸಿ ಮತ್ತು ಸಿಇಒ ಅವರಿಗೆ ಮಾವಿನ ಕಾಯಿ ನೀಡಿ ಗ್ರಾಪಂ ಸದಸ್ಯ ಶಂಕರಗೌಡ ಪಾಟೀಲ, ಜೈಭೀಮ ಮೇಲಿನಕೇರಿ ಸ್ವಾಗತಿಸಿದರು. ಗ್ರಾಮದ ಶ್ರೀಶೈಲ ರೇವೂರ್, ಲಕ್ಷ್ಮೀಕಾಂತ್ ಜಮಾದಾರ, ಪ್ರಭುಲಿಂಗ ಪಾಟೀಲ, ದತ್ತಾ ಕೋಚ್ಚಿ ಹಾಜರಿದ್ದು ಗ್ರಾಮದಲ್ಲಿನ ನೀರಿನ ಮೂಲ ಭತ್ತಿಹೋಗಿದ್ದು ಜನಕ್ಕೆ ಕುಡಿಯಲು ನೀರಿಲ್ಲ ಎಂದು ಗಮನಕ್ಕೆ ತಂದಾಗ ಸಿಡಿ ಅವರು ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ಶಾಶ್ವತ ಕ್ರಮಕ್ಕೆ ಜಲಮೂಲದಿಂದ ತೆರೆದ ಬಾವಿತೋಡಿ ಶಾಶ್ವತ ಕ್ರಮ ಕೈಗೊಳ್ಳುವಂತೆ ಹಾಜರಿದ್ದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News