ಕೃತಕ ಬುದ್ಧಿಮತ್ತೆ ಗಣನೀಯವಾಗಿ ಕ್ರಾಂತಿ ಮಾಡುತ್ತಲಿದೆ : ಪ್ರೊ.ಗುರೂ ಶ್ರೀರಾಮುಲು

ಕಲಬುರಗಿ : ವಿವಿಧ ಕ್ಷೇತ್ರಗಳಲ್ಲಿ ಶೈಕ್ಷಣಿಕ ಬರವಣಿಗೆ ಮತ್ತು ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ ಇಂದು ಗಣನೀಯವಾಗಿ ಕ್ರಾಂತಿಯನ್ನುಂಟು ಮಾಡುತ್ತಲಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗೂರೂ ಶ್ರೀರಾಮುಲು ಹೇಳಿದರು.
ಗುಲ್ಬರ್ಗ ವಿವಿಯ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ "ಸಂಶೋಧನಾ ಪದ್ದತಿ ಮತ್ತು ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ ಎಂಬ 5 ದಿನಗಳ ನಡೆಯುವ ಸಂಶೋಧನಾ ಸಪ್ತಾಹ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಮಾಹಿತಿ ತಂತ್ರಜ್ಞಾನದಿಂದ ಸಂಶೋಧನೆಗಳು ಸುಲಭ ಆದರೂ, ಅದಕ್ಕೆ ಸಾಕಷ್ಟು ಕೊರತೆಗಳನ್ನು ಮತ್ತು ಸಮಸ್ಯೆಗಳನ್ನು ಅನುಭವಿಸುತ್ತಾ ಇದ್ದೇವೆ. ಇದಕ್ಕೆ ಉತ್ತಮ ತರಬೇತಿ ಇಂದು ಬಹಳ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ್ ಲಂಡನಕರ್ ಮಾತನಾಡಿ, ಸಂಶೋಧನಾರ್ಥೀಗಳಿಗೆ ಎಲ್ಲಾ ಬಗೆಯ ಜ್ಞಾನ ಅಗತ್ಯವಿದೆ. ಈ ಜ್ಞಾನವನ್ನು ಗಳಿಸುವಲ್ಲಿ ಗ್ರಂಥಾಲಯದ ಮಹತ್ವ ಬಹಳಷ್ಟು ಇದೆ ಎಂದರು.
ಸಂಶೋಧನಾ ವಿದ್ಯಾರ್ಥಿ ಮೊದಲು ರಿಸರ್ಚ್ ಎಥೀಕ್ಸ್ ತಿಳಿದುಕೊಳ್ಳಬೇಕು, ಆಮೇಲೆ ಹಲವು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ಕಲೆ ಹಾಕಬೇಕಾಗುತ್ತದೆ, ಆಗ ಗಟ್ಟಿ ಸಂಶೋಧನೆ ಹೊರಬರಲು ಸಾಧ್ಯವಾಗುತ್ತದೆ ಎಂದರು.
ಗ್ರಂಥಪಾಲಕ ಡಾ.ಸುರೇಶ್ ಜಂಗೆ, ಡಾ.ದೇವಿದಾಸ ಮಾಲೆ, ಡಾ.ಪ್ರವೀಣ್ ಕುಮಾರ್ ಕುಂಬಾರಗೌಡ್ರ, ಡಾ.ಮಮತಾ ಮೇಸ್ತ್ರಿ, ಖೇಮಣ್ಣ ಅಲ್ದಿ, ಶಂಕರಗೌಡ, ಡಾ.ರಾಜಕುಮಾರ ದಣ್ಣೂರ ಇತರರು ಇದ್ದರು. ಕಾರ್ಯಾಗಾರದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಂದ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.
ಸ್ಕೋಪಸ್ ಕೃತಕ ಬುದ್ಧಿಮತ್ತೆ ವಿಶ್ವಾದ್ಯಂತ ಶಿಕ್ಷಣ ಸಂಸ್ಥೆಗಳಿಗೆ ಒಂದು ಮಹತ್ವದ ಬದಲಾವಣೆ ತಂದಿದೆ. ಸಂಶೋಧನಾ ಪ್ರಕ್ರಿಯೆಯನ್ನು ಸುಗಮಗೊಳಿಸುವುದರಿಂದ ಹಿಡಿದು ಹೊಸ ಹೊಸ ಟ್ರೆಂಡಿಂಗ್ ಸಂಶೋಧನೆಯನ್ನು ಆವಿಷ್ಕಾರ ಆಗುತ್ತಲಿದೆ.
ಡಾ. ಪ್ರವೀಣ್ ಕುಮಾರ್ ಕುಂಬಾರಗೌಡ್ರ (ಕಾರ್ಯಕ್ರಮ ಸಂಯೋಜಕ)