ಕಲಬುರಗಿ | ಬಾಲಕನ ಪೋಷಕರ ಪತ್ತೆಗೆ ಮನವಿ

Update: 2025-03-29 20:22 IST
ಕಲಬುರಗಿ | ಬಾಲಕನ ಪೋಷಕರ ಪತ್ತೆಗೆ ಮನವಿ
  • whatsapp icon

ಕಲಬುರಗಿ : ಫೆ.2ರಂದು 16 ವರ್ಷದ ಬಾಲಕ ಮಕ್ಕಳ ಸಹಾಯವಾಣಿ-1098 ಮೂಲಕ ಕಲಬುರಗಿ ಸರ್ಕಾರಿ ಬಾಲಕರ ಬಾಲಮಂದಿರ ಸಂಸ್ಥೆಯಲ್ಲಿ ದಾಖಲಾಗಿದ್ದು, ಬಾಲಕನಿಗೆ ತನ್ನ ವಿಳಾಸ/ಕುಟುಂಬದ ಮಾಹಿತಿ ಸ್ಪಷ್ಟವಾಗಿ ತಿಳಿಸಿದಿಲ್ಲ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಈ ಬಾಲಕನು ತನ್ನ ಹೆಸರು ದುರ್ಗೇಶ ಎಂದು ತಿಳಿಸಿದ್ದು, ಬಾಲಕನ ಪಾಲಕ-ಪೋಷಕರು ಯಾರಾದರೂ ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವೀಕ್ಷಣಾಲಯ ಕಟ್ಟಡದ ಮೊದಲನೇ ಮಹಡಿ, ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಎದುರುಗಡೆ, ಕಲಬುರಗಿ, ದೂರವಾಣಿ ಸಂಖ್ಯೆ 08472-243219 ಕಚೇರಿಯನ್ನು ಹಾಗೂ ಕಲಬುರಗಿಪ್ರಗತಿ ಕಾಲೋನಿ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರ ಮೊಬೈಲ್ ಸಂಖ್ಯೆ 9164474480, 9620023320 ಗಳಿಗೆ ಕರೆಮಾಡಿ ತಿಳಿಸಬೇಕೆಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News