ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆಗೆ ನೀರಾವರಿಯ ಕೊರತೆ ಮುಖ್ಯ ಕಾರಣ : ಕೋಡಿಹಳ್ಳಿ ಚಂದ್ರಶೇಖರ್

Update: 2025-04-07 21:13 IST
ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆಗೆ ನೀರಾವರಿಯ ಕೊರತೆ ಮುಖ್ಯ ಕಾರಣ : ಕೋಡಿಹಳ್ಳಿ ಚಂದ್ರಶೇಖರ್
  • whatsapp icon

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ರೈತರ ಆರ್ಥಿಕ ದುಸ್ಥಿತಿಗೆ ಸಂಪೂರ್ಣ ನೀರಾವರಿಯ ಕೊರತೆಯೇ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಅವರು ಇಂದು ಅಫ್ಜಲ್ಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಜಿಲ್ಲಾ ಮಟ್ಟದ ರೈತ ಜಾಗೃತಿ ಸಮಾವೇಶದ ಉದ್ಘಾಟಿಸಿ ಮಾತನಾಡಿದರು.

ಅಫ್ಜಲ್ಪುರ, ಜೇವರ್ಗಿ ಎರಡು ತಾಲೂಕುಗಳ ಜೀವನಾಡಿಯಾಗಿರುವ ಭೀಮಾನದಿಂದ ಸಂಪೂರ್ಣ ಮೇದ ನೀರನ್ನು ನೀರಾವರಿಗಾಗಿ ಬಳಸಿಕೊಂಡಿಲ್ಲ. ಅಫ್ಜಲ್ಪುರ ತಾಲೂಕಿನಲ್ಲಿ ಕೇವಲ ಶೇ.25ರಷ್ಟು ಭೂಮಿ ಕೂಡ ನೀರಾವರಿಗೆ ಒಳಪಟ್ಟಿಲ್ಲ. ಪಕ್ಕದಲ್ಲಿ ಹರಿಯುವ ಭೀಮಾನದಿ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಇದಕ್ಕೆ ಕಾರಣ ಈ ಭಾಗದ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆ ಎಂದು ಅವರು ದೂರಿದರು.

ಅಫ್ಜಲ್ಪುರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಎಂ.ವೈ.ಪಾಟೀಲ್ ಅವರು ಸಮಾವೇಶದಲ್ಲಿ ರೈತರ ದುಡಿಮೆಯ ಸಂಕೇತವಾದ ನೇಗಿಲು ಪೂಜೆ ಮಾಡುವ ಮೂಲಕ ಸಮಾವೇಶದಲ್ಲಿ ಮಾತನಾಡಿದರು.

ರೈತರು ದೇಶದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ ಇವತ್ತು ಪರಿಸ್ಥಿತಿ ತೀರಾ ಬದಗಿಟ್ಟಿದೆ. ಒಬ್ಬ ಸರಕಾರಿ ಕಚೇರಿಯ ಗುಮಾಸ್ತ ಇಲ್ಲವೇ ಸೇವಕನನ್ನಾದರೂ ಮಗಳು ಕೊಡಲು ಪಾಲಕರು ಹಿಂಜರಿಯುವುದಿಲ್ಲ, ಆದರೆ ಒಬ್ಬ ರೈತನಿಗೆ ಮದುವೆ ಮಾಡಿಕೊಡಲು ಹೆದರುತ್ತಿದ್ದಾರೆ ಎಂದು ಹೇಳಿದರು. ಈ ಪರಿಸ್ಥಿತಿಯ ಸುಧಾರಣೆಯಾಗಬೇಕಾದರೆ ರೈತರು ಜಾಗೃತರಾಗಬೇಕು ಎಂದು ಕರೆ ನೀಡಿದರು.

ಸಾವಯವ ಕೃಷಿ ತಜ್ಞ ಡಾ.ಮಲ್ಲಿನಾಥ್ ಅವರು ಮಾತನಾಡಿ, ನಮ್ಮ ಪಾರಂಪರಿಕ ಕೃಷಿ ಪದ್ಧತಿಯನ್ನು ನಾವು ಕೈ ಬಿಟ್ಟು ಈಗ ಒದ್ದಾಡುತ್ತಿದ್ದೇವೆ ಮತ್ತೆ ನಾವು ಸಾವಯವ ಕೃಷಿಯ ಕಡೆ ಮುಖ ಮಾಡಬೇಕಾಗಿದೆ ಎಂದು ಹೇಳಿದರು.

ಪ್ರಖ್ಯಾತ ಜಾನಪದ ಹಾಡುಗಾರ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಸಿದ್ದಪ್ಪ ಬಿದರಿ ಅವರು ತಮ್ಮ ನಗೆ ಹುಟ್ಟಿಸುವ ಜಾನಪದ ಹಾಡುಗಳನ್ನು ಹಾಡುತ್ತಾ ಮಾತನಾಡಿದರು. ರೈತ ಸಂಘದ ಉಪಾಧ್ಯಕ್ಷ ಮಹಾದೇವಿ ಅವರು ಮಾತನಾಡಿ, ರೈತರ ಬದುಕಿನಲ್ಲಿ ಮಹಿಳೆಯರ ಪಾತ್ರ ದೊಡ್ಡದಾಗಿದೆ, ಆದ್ದರಿಂದ ಮಹಿಳೆಯ ರೈತ ಮಹಿಳೆಯರು ಇಂಥಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು ಎಂದರು.

ಕಲಬುರಗಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಮಹಾಂತೇಶ್ ಜಮಾದಾರ್ ಮಾತನಾಡಿದರು.

ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಬೈರೇಗೌಡ ಮತ್ತು ಇತರರು ಮಾತನಾಡಿದರು. ಅಫಜಲಪುರ ತಾಲೂಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಮಂಜುನಾಥ ನಾಯ್ಕೋಡಿ ಸ್ವಾಗತಿಸಿದರು. ರವಿ ಗುಂಡಗುರ್ತಿ ನಿರೂಪಿಸಿದರು. ಅಫಜಲಪುರ ಹಿರೇಮಠದ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ಮಲ್ಲನಗೌಡ ಪಾಟೀಲ್, ಮಹಾದೇವಿ ಬೇಗಾರ, ಜೈ ಲಕ್ಷ್ಮಿ, ರಮಾ ಸಜ್ಜನ, ಶರಣಪ್ಪ ಶಂಬಳ್ಳಿ,ಶಿವಯ್ಯ ಸ್ವಾಮಿ, ಜಗದೀಶ್ ಜೇವರ್ಗಿ, ಮಹಾಂತೇಶ ಜಮಾದಾರ್ ,ಮಲ್ಲಣ್ಣ ಪಡ ಶಟ್ಟಿ,ಮಹಾದೇವಿ ಬಿರಾದಾರ್, ಮಹಬೂಬ್ ಬಾಷಾ, ಬಸಮ್ಮ ಬಿರಾದಾರ್, ಹನುಮಗೌಡ ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಕಮಲಾಬಾಯಿ ಸಜ್ಜನ್, ವಿಠಲ್ ,ಶರಣಪ್ಪ ಜಂಬಾಳೆ, ರಮೇಶ , ಪರಮೇಶ್ವರ ಜಳಕಿ, ಬಸವರಾಜ ಹಡಪದ, ಶಿವಯ್ಯ ಸ್ವಾಮಿ, ಪರಮೇಶ್ವರ ರಾಥೋಡ್,ಮರೆಪ್ಪ ಹಸನಾಪುರ, ಸರಸ್ವತಿ ಹಡಪದ, ಕಲಬುರ್ಗಿ ಜಿಲ್ಲೆಯ ವಿವಿಧ ತಾಲೂಕ ಅಧ್ಯಕ್ಷರುಗಳಾದ ಈರಣ್ಣ ಭಜಂತ್ರಿ, ಜಗದೀಶ ಕಡ್ಲಿ, ಸಂಗನಗೌಡ ಘಂಟಿ, ಪರಮೇಶ್ವರ ಮತ್ತಿಮು ಡ,ಬಸವರಾಜ ಸೀರೊಳ್ಳಿ, ಚನ್ನವೀರ ಸ್ವಾಮಿ, ಶಿವಲಿಂಗಪ್ಪ ಪೂಜಾರಿ, ಅಫಜಲ್ಪುರ ತಾಲೂಕ ಪದಾಧಿಕಾರಿಗಳಾದ ಪ್ರಕಾಶ್ ಹ, ಕೃಷ್ಣ ಪಾಟೀಲ,ಶ್ರೀಶೈಲ ಗೋಳೇ, ಸಿದ್ದಣ್ಣ ಅಂಕಲಗಿ, ಅಪ್ಪಶಾ ನರಗೂಧಿ, ಜಗನ್ನಾಥ ಸಾಂಗ್ವಿ, ಮಲ್ಲನಗೌಡ ಪಾಟೀಲ, ಬಾಬು, ದತ್ತು ಪೂಜಾರಿ, ಸೂರ್ಯಕಾಂತ್ ಸಿದ್ದನಗೌಡ ಮುದಗೊಂಡ, ಮಲಕಾರಿ ಪೂಜಾರಿ, ಬೀರಪ್ಪ, ಭಾಷಾ ಸಾಬ್ ಮುಲ್ಲಾ, ಶರಣಪ್ಪ ಜೈನಾಪುರ, ಮಲ್ಲಯ್ಯ ಹಿರೇಮಠ, ಭಾಗಪ್ಪ ಕೊಳ್ಳಿ, ಶರಣಪ್ಪ ಜೈನಾಪುರ, ಹಣಮಂತ ನಾಯ್ಕೋಡಿ, ಶಿವಾನಂದ, ಸತೀಶ, ವಿಜುಗೌಡ ಪಾಟೀಲ, ಗುಂಡೂರಾವ್ ನಾಗಠಾಣಾ,ಪ್ರಕಾಶ ಜಮಾದಾರ, ಸದ್ದಾಮ ಅಕ್ತರ್, ಮಲ್ಲಿಕಾರ್ಜುನ ವಾಲಿಕಾರ್, ಹುಚ್ಚಪ್ಪ ನಾಗಸಂದ್ರ, ಚನ್ನು ಚಿಂಚೋಳಿ, ಮಹಾರಾಜ ಕುರುಬು, ಮಲ್ಲಿಕಾರ್ಜುನ್ ವಾಲಿಕಾರ್, ಜಮಾದಾರ್ ಶಾoತಪ್ಪ ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News