ಕಲಬುರಗಿ | ವಕ್ಫ್ ತಿದ್ದುಪಡಿ ವಿರೋಧಿಸಿ ಮರ್ಕಝಿ ಸೀರತ್ ಕಮಿಟಿಯ ಸಭೆ

ಕಲಬುರಗಿ : ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮರ್ಕಝಿ ಸೀರತ್ ಸಮಿತಿಯ ವತಿಯಿಂದ ಆಯೋಜಿಸಿದ ಸಮಾಲೋಚನೆ ಸಭೆಯು ಶಾಸಕಿ ಕನೀಜ್ ಫಾತೀಮಾ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಡಾ.ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರ ನೇತೃತ್ವದಲ್ಲಿ ನಡೆಯಿತು.
ನಗರದ ಕೆಸಿಟಿ ಕಾಲೇಜ್ ಮೈದಾನದಲ್ಲಿ ನಡೆದ ಸಭೆಯಲ್ಲಿ ವಿದ್ವಾಂಸರು, ಚಿಂತಿಕರು, ಧಾರ್ಮಿಕ ಮುಖಂಡರು, ವಿವಿಧ ದರ್ಗಾಗಳ ಪೀಠಾಧಿಪತಿಗಳು, ಮುಫ್ತಿಗಳು, ವಕೀಲರು, ವೈದ್ಯರು, ಉದ್ಯಮಿಗಳು ಮತ್ತು ವಿವಿಧ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಫರಾಜ್ ಉಲ್ ಇಸ್ಲಾಂ, ಸಿರಾಜುದ್ದೀನ್ ಜುನೈದಿ ಸಾಹೇಬ್, ಮೌಲಾನಾ ಶರೀಫ್ ಮಝಾರಿ, ಬಾಬಾ ನಜರ್ ಮುಹಮ್ಮದ್ ಖಾನ್, ಮೌಲಾನಾ ವಹೇದ್, ಮುಲಾನಾ, ಅಬ್ದುಲ್ ಸತ್ತಾರ್, ಮುಲಾನಾ, ಅಬ್ದುಲ್ ಸತ್ತಾರ್ ಮಿಸ್ಬಾಹಿ, ಹಫೀಜ್ ಸೈಯದ್ ಅಜರ್ ಅಲಿ, ಮಝರ್ ಖಾನ್ ಸಾಬ್, ವಕೀಲ ವಹಾಜ್ ಬಾಬಾ, ನಜ್ಮುಲ್ ಇಸ್ಲಾಂ ಅಹ್ಮರ್, ಸೈಯದ್ ಅಹ್ಮದ್ ಮತ್ತು ಮೌಲಾನಾ ಮೊಹಮ್ಮದ್ ನೂಹ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಭಾಗವಹಿಸಿ ಮುಂದಿನ ಹೋರಾಟದ ನಡೆಗಳ ಕುರಿತು ವಿಸ್ತಾರವಾಗಿ ಚರ್ಚಿಸಲಾಯಿತು.